ನವದೆಹಲಿ, ಮಾರ್ಚ್ 26:
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರನ್ನು ಹನಿ ಟ್ರ್ಯಾಪ್ ಮಾಡುವ ಪ್ರಯತ್ನಗಳ ಕುರಿತು ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ವೇಳೆ, ನ್ಯಾಯಾಧೀಶರು ಅರ್ಜಿದಾರನಿಗೆ ಕಠಿಣ ಪ್ರಶ್ನೆಗಳನ್ನು ಕೇಳಿ ತರಾಟೆಗೆ ತೆಗೆದುಕೊಂಡರು.
“ಕರ್ನಾಟಕದ ವಿದ್ಯಾಮಾನಕ್ಕೂ ನಿಮಗೂ ಏನು ಸಂಬಂಧ?”
ಅರ್ಜಿದಾರನು ಸಲ್ಲಿಸಿದ್ದ ಮನವಿಯ ಪ್ರಾಸಕ್ತತೆಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, “ಕರ್ನಾಟಕದ ವಿದ್ಯಮಾನಕ್ಕೂ ನಿಮಗೂ ಏನು ಸಂಬಂಧ?” ಎಂದು ಪ್ರಶ್ನಿಸಿದರು. ನ್ಯಾಯಾಧೀಶರನ್ನು ಹನಿ ಟ್ರ್ಯಾಪ್ ಮಾಡಲು ಯತ್ನಿಸಲಾಗುತ್ತಿದೆ ಎಂಬ ಬಗ್ಗೆ ಅದನ್ನು ತೀರ್ಮಾನಿಸುವ ಅಧಿಕಾರ ಸ್ವತಃ ನ್ಯಾಯಾಂಗದ ಕೈಯಲ್ಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಾಧೀಶರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ – ಸುಪ್ರೀಂ ಕೋರ್ಟ್
ನ್ಯಾಯಾಧೀಶರನ್ನು ಹನಿ ಟ್ರ್ಯಾಪ್ ಮಾಡುವ ಕುರಿತು ಅವರು ತಾವೇ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ಪ್ರದರ್ಶಿಸುವ ಅಗತ್ಯವಿಲ್ಲ ಎಂಬ ಕಾರಣ ನೀಡಿ, ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.
ಈ ನಿರ್ಧಾರವು ನ್ಯಾಯಾಂಗದ ಸ್ವಾಯತ್ತತೆ ಮತ್ತು ಸ್ವತಂತ್ರತೆಗೆ ಬಲವನ್ನು ಒದಗಿಸುವ ಮಹತ್ವದ ಅಭಿಪ್ರಾಯ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.