ಬೆಂಗಳೂರು: ಇಡ್ಲಿ ಮಾಲಿನ್ಯ ಪ್ರಕರಣದ ನಂತರ, ರಾಜ್ಯದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇದೀಗ ಪನ್ನೀರ್ ಹಾಗೂ ಸಿಹಿ ತಿಂಡಿಗಳ ಮೇಲೆ ಕಣ್ಣುಹಾಯಿಸಿದೆ. ಹೋಳಿ ಹಬ್ಬದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ತಿಂಡಿಗಳ ಗುಣಮಟ್ಟ ಹಾಗೂ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಮೆಗಾ ಆಪರೇಷನ್ ಕೈಗೊಳ್ಳಲಾಗಿದೆ.

ಆಹಾರ ಸುರಕ್ಷತೆ ಅಧಿಕಾರಿಗಳು ವಿವಿಧ ಜಿಲ್ಲೆಗಳಲ್ಲಿ ಸಿಹಿ ತಿಂಡಿಗಳು, ಖಾರದ ತಿಂಡಿಗಳು, ಹಾಲು ಉತ್ಪನ್ನಗಳು ಮತ್ತು ಪನ್ನೀರ್‌ನ ನೂರಾರು ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ. ಯಾವುದೇ ಕಲಬೆರಕೆ ಆಗಿರುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಅಧಿಕೃತ ಮಾಹಿತಿ ಪ್ರಕಾರ, ಮಾರ್ಚ್ 15ರ ನಂತರ ಈ ಮಾದರಿಗಳ ವರದಿ ಲಭ್ಯವಾಗಲಿದೆ. ವರದಿ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಗ್ರಾಹಕರು ಗುಣಮಟ್ಟದ ಆಹಾರ ಸೇವಿಸಬಹುದು ಎಂಬ ನಿರೀಕ್ಷೆ ಇದೆ.