ಬೆಂಗಳೂರು: ತರೀಕೆರೆ ತಾಲೂಕಿನಲ್ಲಿರುವ 12ನೇ ಶತಮಾನದ ಶಿವಶರಣೆ ಅಕ್ಕನಾಗಮ್ಮ/ಅಕ್ಕನಾಗಲಂಬಿಕರವರ ಸಮಾಧಿಯನ್ನು “ರಾಜ್ಯ ಸಂರಕ್ಷಿತ ಸ್ಮಾರಕ”ವನ್ನಾಗಿ ಘೋಷಿಸಲು ಸರ್ಕಾರ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದ ಗಮನ ಸೆಳೆಯುವ ಸೂಚನೆ ವೇಳೆಯಲ್ಲಿ ಸದಸ್ಯ ಜಿ.ಹೆಚ್.ಶ್ರೀನಿವಾಸ್ ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಉತ್ತರಿಸಿದ ಸಚಿವರು, ಈ ಪ್ರಸ್ತಾವವು ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದ್ದು, ಅತಿ ಶೀಘ್ರದಲ್ಲಿ ಅಂತಿಮ ಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಈ ಘೋಷಣೆಯಿಂದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವದ ಈ ಸ್ಥಳವನ್ನು ಸಂರಕ್ಷಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ.