ಬೆಂಗಳೂರು: ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳು ಇಂದು 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ.
ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಷರತ್ತಿನ ಪ್ರಕಾರ ಆರೋಪಿಗಳು ಪ್ರತೀ ತಿಂಗಳು ಕೋರ್ಟ್ ಮುಂದೆ ಹಾಜರಾಗಬೇಕು. ಅದರಂತೆ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ.
ಹೆಚ್ಚು ಗಮನ ಸೆಳೆಯುತ್ತಿರುವುದು, ದರ್ಶನ್ ಹಾಗೂ ಪವಿತ್ರಾಗೌಡ ನಡುವೆ ನಡೆಯಲಿರುವ ಸಾಧ್ಯತೆ ಇರುವ ‘ಮುಖಾಮುಖಿ’ಯಾಗಿದೆ. ಕಳೆದ ಬಾರಿ ಇಬ್ಬರೂ ಕೋರ್ಟ್‌ಗೆ ಹಾಜರಾದರೂ, ಅವರು ಒಬ್ಬರ ಮುಖವೂ ನೋಡದಂತೆ ದೂರವಿದ್ದು, ಮಾತುಕತೆ ನಡೆಯಲೇ ಇಲ್ಲ.
ಇಂದು ಮಾತ್ರ ಇಬ್ಬರೂ ಎದುರುಮುಖವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ದರ್ಶನ್ – ಪವಿತ್ರಾ ನಡುವೆ ಮಾತುಕತೆ ನಡೆಯುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ನ್ಯಾಯಾಲಯದ ಬಳಿ ಭದ್ರತೆ ಬಿಗಿಗೊಳಿಸಲಾಗಿದ್ದು, ಸಾರ್ವಜನಿಕರ ಗಮನವೂ ಈ ವಿಚಾರದತ್ತ ಸೆಳೆಯುತ್ತಿದೆ.