ಬೆಂಗಳೂರು: ಬೆಂಗಳೂರು ಆ್ಯನಿಮೇಶನ್ ಇಂಡಸ್ಟ್ರಿ ಅಸೋಸಿಯೇಷನ್ (ABAI) ವತಿಯಿಂದ ಇಂದು ಬೆಂಗಳೂರಿನಲ್ಲಿ ವಿಶಿಷ್ಟ VFX ಸ್ಪರ್ಧೆಯು ನಡೆಯಿತು. WAVES ಚ್ಯಾಲೆಂಜ್ ಎಂಬ ಹೆಸರಿನಲ್ಲಿ ಆಯೋಜಿಸಲಾದ ಈ ಸ್ಪರ್ಧೆ, ದಕ್ಷಿಣ ವಲಯದ VFX ಸ್ಪರ್ಧೆಯ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶ ಹೊಂದಿತ್ತು.
ಇದು ಎಂಟು ಗಂಟೆಗಳ ಕಾಲ ನಡೆಯುವ ಮ್ಯಾರಥಾನ್ ಸ್ಪರ್ಧೆಯಾಗಿ ರೂಪುಗೊಂಡಿತ್ತು. ಭಾಗವಹಿಸಿದ ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆ, ಸೃಜನಾತ್ಮಕತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು. WAVES2025 ಹಾಗೂ WAVESIndia ಹ್ಯಾಶ್‌ಟ್ಯಾಗ್‌ಗಳೊಂದಿಗೆ ಈ ಸ್ಪರ್ಧೆಯ ಸದ್ದು ಸಾಮಾಜಿಕ ಜಾಲತಾಣಗಳಲ್ಲೂ ಮೊಳಗಿತು.
ಈ ಕಾರ್ಯಕ್ರಮವು ದಕ್ಷಿಣ ಭಾರತದ VFX ಕ್ಷೇತ್ರದ ಪ್ರತಿಭಾಶಾಲಿಗಳಿಗೆ in ವೇದಿಕೆಯಾಗಿದ್ದು, ಮುಂಬರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆಯ ಪ್ರಮುಖ ಹಂತವಾಗಿ