ಬೆಂಗಳೂರು: ಬಸವೇಶ್ವರ ನಗರ ಪೊಲೀಸ್ ಠಾಣೆಗೆ ರೀಲ್ಸ್ ಸ್ಟಾರ್ ರಜತ್ ಇಂದು ಮತ್ತೆ ಆಗಮಿಸಿದ್ದು, ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದರು. ಈ ಕುರಿತಂತೆ ತನಿಖೆ ಮುಂದುವರಿದಿದೆ.
ಪೂರ್ವದಲ್ಲಿ ಇದೇ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ರಜತ್, ಪ್ರತಿಯೊಂದು ವಿಚಾರಣೆಯಲ್ಲೂ ಹಾಜರಾಗುವಂತೆ ನ್ಯಾಯಾಲಯದಿಂದ ಕಟ್ಟುನಿಟ್ಟಾದ ಷರತ್ತು ವಿಧಿಸಲಾಗಿತ್ತು. ಆದರೂ, ನಿಗದಿತ ದಿನಾಂಕದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ನ್ಯಾಯಾಲಯ ರಜತ್ ವಿರುದ್ಧ ವಾರಂಟ್ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾದ ರಜತ್ ಅನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಅವರನ್ನು ನ್ಯಾಯಾಲಯದ ಹಾಲ್ ನಂಬರ್ 24ಕ್ಕೆ ಹಾಜರುಪಡಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.
ಪ್ರಕರಣದ ಬಳಿಕದ ಬೆಳವಣಿಗೆಗಳತ್ತ ರಾಜ್ಯದ ಗಮನ ತಿರುಗಿದ್ದು, ಪೊಲೀಸರ ಕ್ರಮ ಹಾಗೂ ನ್ಯಾಯಾಲಯದ ತೀರ್ಮಾನ ಪ್ರಮುಖವಾಗಲಿದೆ.