ನೆಲಮಂಗಲ: ಏಪ್ರಿಲ್ 17 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗಲಿದ್ದು, ಅದರ ನಂತರವೇ ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸುವುದು ಸೂಕ್ತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
“ವೀರಶೈವ ಲಿಂಗಾಯತ ಸಮುದಾಯದಲ್ಲಿ 103 ಉಪಪಂಗಡಗಳಿವೆ. ಈ ಎಲ್ಲಾ ಪಂಗಡಗಳಿಗೂ ನ್ಯಾಯ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇತರೆ ಸಮುದಾಯಗಳ ಪ್ರತಿಕ್ರಿಯೆಗಳ ಕುರಿತು ಪ್ರತಿಕ್ರಿಯಿಸುವುದು ಸೂಕ್ತವಲ್ಲ,” ಎಂದು ಅವರು ಹೇಳಿದರು.
ಸಮಾಜದಲ್ಲಿ ಸಮತೋಲತೆ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಜಾತಿಗಣತಿ ವರದಿಯ ವಿಚಾರದಲ್ಲಿ ತಾಳ್ಮೆ ಮತ್ತು ವಿಚಾರಪೂರ್ಣ ಚರ್ಚೆ ಅವಶ್ಯಕ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.