ಪಹಲ್ಗಾಮ್: ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
“ಈ ಹೀನಕೃತ್ಯವು ಅತ್ಯಂತ ಖಂಡನೀಯ ಹಾಗೂ ಅಮಾನುಷವಾಗಿದೆ. ಗೌರವಾನ್ವಿತ ಪ್ರಧಾನಿಗಳಾದ ನರೆಂದ್ರ ಮೋದಿಯವರ ಬಲಿಷ್ಠ ನಾಯಕತ್ವದ ಫಲವಾಗಿ ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯಾಗಿತ್ತು. ಆದರೆ ಆ ಶಾಂತಿಯನ್ನು ಹಾಳುಮಾಡುವ ದುರುದ್ದೇಶದಿಂದ ಉಗ್ರರು ಈ ದಾಳಿಯನ್ನು ಎಸಗಿದ್ದಾರೆ,” ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ಭಯೋತ್ಪಾದನೆ ಭಾರತವನ್ನು ಒತ್ತಡಕ್ಕೆ ತರುವುದಿಲ್ಲ ಎಂಬ ದೃಢ ನಿಲುವು ವ್ಯಕ್ತಪಡಿಸಿರುವ ಅವರು, ಇಂತಹ ವಿನಾಶಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿ ಭಾರತಕ್ಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಈ ಅಮಾನವೀಯ ದಾಳಿಯಲ್ಲಿ ಜೀವಹರಣಗೊಂಡವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಅವರು ತಮ್ಮ ಸಂತಾಪದ ಮಾತುಗಳ ಮೂಲಕ ತಿಳಿಸಿದ್ದಾರೆ.