ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವತಿಯಿಂದ 2025ರ NEET(UG) ಪರೀಕ್ಷೆ ಮೇ 4 ರಂದು ಕರ್ನಾಟಕದ 381 ಕೇಂದ್ರಗಳಲ್ಲಿ ಮಧ್ಯಾಹ್ನ 2.00 ರಿಂದ ಸಂಜೆ 5.00 ಗಂಟೆಯವರೆಗೆ ನಡೆಯಲಿದೆ. 1,49,000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳು ಬೆಳಿಗ್ಗೆ 11.00 ರಿಂದ 1.30 ಗಂಟೆಯೊಳಗೆ ಪ್ರವೇಶಾತಿ ಪತ್ರ, ಗುರುತಿನ ಚೀಟಿ, ಪೋಸ್ಟ್ ಕಾರ್ಡ್, ಎರಡು ಪಾಸ್‌ಪೋರ್ಟ್ ಫೋಟೋಗಳೊಂದಿಗೆ ಕೇಂದ್ರಕ್ಕೆ ಬರಬೇಕು.
ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿದ್ದು, ಎಲೆಕ್ಟ್ರಾನಿಕ್ ಉಪಕರಣಗಳು, ಮೆಟಲ್ ವಸ್ತುಗಳು, ದೊಡ್ಡ ಬಟನ್/ತೋಳಿನ ಉಡುಪುಗಳು ನಿಷಿದ್ಧ. ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್, ಫ್ರಿಸ್ಕಿಂಗ್, ಪೊಲೀಸ್ ತಪಾಸಣೆ, ವಿದ್ಯುತ್, ಆರೋಗ್ಯ ಸಿಬ್ಬಂದಿ, ದಿವ್ಯಾಂಗರಿಗೆ ವ್ಹೀಲ್‌ಚೇರ್, ಆಗ್ನಿಶಾಮಕ ವ್ಯವಸ್ಥೆ ಒದಗಿಸಲಾಗಿದೆ. ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಯಾಗಿದ್ದು, ಅನಧಿಕೃತ ಪ್ರವೇಶ ನಿಷಿದ್ಧ.