ಬೆಂಗಳೂರು: ಭಾರತದ ಇತಿಹಾಸದಲ್ಲಿ 1931ರ ನಂತರ ಮೊದಲ ಬಾರಿಗೆ, ಜಾತಿಗಣತಿಯನ್ನು ಮುಂಬರುವ ರಾಷ್ಟ್ರೀಯ ಜನಗಣತಿಯ ಭಾಗವನ್ನಾಗಿಸುವ ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕರತ್ವದಲ್ಲಿ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಈ ನಿರ್ಧಾರವನ್ನು ‘ಐತಿಹಾಸಿಕ ಮತ್ತು ದೂರದರ್ಶಿತ್ವಪೂರ್ಣ’ ಎಂದು ಗುರುತಿಸಿದ ಅವರು, “ಇದು ಪ್ರಾಮಾಣಿಕ, ವೈಜ್ಞಾನಿಕ ಹಾಗೂ ಪಾರದರ್ಶಕ ಜಾತಿ ಮಾಹಿತಿ ದೊರಕಿಸಲು ದಾರಿ ಮಾಡಿಕೊಡುತ್ತದೆ. ರಾಜ್ಯಮಟ್ಟದ ರಾಜಕೀಯ ಪ್ರೇರಿತ ಸಮೀಕ್ಷೆಗಳಿಂದ ಹೊರಬಂದು, ದೇಶದ ಮಟ್ಟದಲ್ಲಿ ಒಗ್ಗಟ್ಟಿನ ಹತ್ತಿರ ಹೋಗುವ ಪ್ರಯತ್ನ ಇದಾಗಿದೆ,” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಆಂತರಿಕ ಆಳ್ವಿಕೆಗೆ data-ಆಧಾರಿತ ನೀತಿ ರೂಪಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಇದು ಸಾಮಾಜಿಕ ನ್ಯಾಯವನ್ನು ಬಲಪಡಿಸಲು ಹಾಗೂ ಸಮಾನತೆಯ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
“ಈ ಮಹತ್ವದ ಹಾಗೂ ರಾಷ್ಟ್ರಹಿತದ ನಿರ್ಧಾರದಿಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು,” ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.