ಬೆಂಗಳೂರು: ಬೆಂಗಳೂರು ನಗರ ಪೊಲೀಸರು ತಂತ್ರಜ್ಞಾನ ಅಳವಡಿಸಿಕೊಂಡು, ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ನಗರ ಪೊಲೀಸ್ ಇಲಾಖೆಯ ಆಂತರಿಕ ಸಂವಹನಕ್ಕಾಗಿ ವಿಶೇಷವಾಗಿ ‘ಬಿಸಿಪಿ ಚಾಟ್’ ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಆ್ಯಪ್‌ದು ಯಾವುದೇ ಹೊರಗಿನ ಅಡಚಣೆ ಇಲ್ಲದೇ, ಸಂಪೂರ್ಣವಾಗಿ ಆಂತರಿಕ ಹಾಗೂ ಸುರಕ್ಷಿತ ಸಂವಹನ ಮತ್ತು ಸಂದೇಶ ವಿನಿಮಯಕ್ಕೆ ಅನುಕೂಲವಾಗುವಂತೆ ರೂಪುಗೊಂಡಿದೆ.
ಬಿಸಿಪಿ ಚಾಟ್‌ನ ಪ್ರಮುಖ ಉಪಯೋಗಗಳು ಹೀಗಿವೆ:
- ಗಣ್ಯ ವ್ಯಕ್ತಿಗಳ ಭೇಟಿ ಹಾಗೂ ಸಂಚಾರದ ಸಮನ್ವಯಕ್ಕೆ
- ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣದ ಮಾಹಿತಿ ವಿನಿಮಯಕ್ಕೆ
- ದೈನಂದಿನ ಅಪರಾಧಗಳ ಸ್ಥಿತಿ ಹಾಗೂ ಪ್ರಗತಿ ಬಗ್ಗೆ ತಿಳಿದುಕೊಳ್ಳಲು
- ಸರ್ಕಾರದ ಆದೇಶಗಳು, ಸುತ್ತೋಲೆಗಳು, ನೋಟಿಸ್‌ಗಳ ಚಾಟ್ ಮೂಲಕ ನೀಡಲು
- ಹಳೆಯ ಕೇಸ್‌ಗಳ ಮಾಹಿತಿಯನ್ನು ತ್ವರಿತವಾಗಿ ಪಡೆಯಲು
ಈ ಆ್ಯಪ್‌ನ್ನು ಕೇವಲ ಪೊಲೀಸ್ ಇಲಾಖೆಯ ಆಂತರಿಕ ಬಳಕೆಗಾಗಿ ಮಾತ್ರ ಸೀಮಿತಗೊಳಿಸಲಾಗಿದೆ. ಸಾರ್ವಜನಿಕರ ಪ್ರವೇಶವಿಲ್ಲದಂತೆ, ಖಾಸಗಿತ್ವ ಹಾಗೂ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಮೆಸೇಜ್‌ಗಳು ಹಾಗೂ ಡೇಟಾ ಎಲ್ಲವೂ ಕರ್ನಾಟಕ ರಾಜ್ಯದ ದತ್ತಾಂಶ ಕೇಂದ್ರದಲ್ಲಿ ಸಂಗ್ರಹವಾಗುವ ವ್ಯವಸ್ಥೆಯೂ ಮಾಡಲಾಗಿದೆ.
ತಾಂತ್ರಿಕ ಸಹಾಯದಿಂದ ನಗರ ಪೊಲೀಸ್ ವ್ಯವಸ್ಥೆ ಇನ್ನಷ್ಟು ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.