ಬೆಂಗಳೂರು: ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ವತಿಯಿಂದ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಫೆಬ್ರವರಿ 6 ರಿಂದ 8 ರವರೆಗೆ ಆಯೋಜಿಸಲಾಗುತ್ತಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 (ITF-2026) ಕುರಿತು ಪತ್ರಿಕಾಗೋಷ್ಠಿ ನಡೆಯಲಿದೆ.
ಮೇಳದ ವಿವರಗಳನ್ನು ತಿಳಿಸುವ ಈ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಉಪಸ್ಥಿತರಿರುತ್ತಾರೆ.
ದಿನಾಂಕ: ಫೆಬ್ರವರಿ 04, 2026 (ಬುಧವಾರ)
ಸಮಯ: ಮಧ್ಯಾಹ್ನ 3:30 ಗಂಟೆ
ಸ್ಥಳ: ಶ್ಯಾಂಗ್ರಿಲಾ ಹೋಟೆಲ್, ವಸಂತ ನಗರ, ಬೆಂಗಳೂರು
“ಉತ್ಪಾದನೆಯಾಚೆ ಕೃಷಿ – ರೈತರ ಸಬಲೀಕರಣ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿರುವ ಈ ಮೇಳವು ರೈತರ ಆದಾಯ ದ್ವಿಗುಣಗೊಳಿಸುವುದು, ಮೌಲ್ಯವರ್ಧನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಸಾವಯವ ಮತ್ತು ಸಿರಿಧಾನ್ಯಗಳ ಮೇಲೆ ವಿಶೇಷ ಒತ್ತು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಪತ್ರಿಕಾಗೋಷ್ಠಿಗೆ ಎಲ್ಲಾ ಮಾಧ್ಯಮ ಸ್ನೇಹಿತರು ಹಾಜರಾಗಿ ಮಾಹಿತಿ ಪಡೆಯಬಹುದು. ಮೇಳದಲ್ಲಿ ರೈತರು, ಉದ್ಯಮಿಗಳು, ತಜ್ಞರು ಹಾಗೂ ಸಾರ್ವಜನಿಕರು ವ್ಯಾಪಕವಾಗಿ ಭಾಗವಹಿಸುವ ನಿರೀಕ್ಷೆಯಿದೆ.











