ರಾಜರೋಷವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದನ್ನು ಶ್ರೀರಾಮಸೇನೆ ವಿರೋಧಿಸಿ 30 ಕೆ ಜಿ ಗೋ ಮಾಂಸವನ್ನು ಪೋಲಿಸ್ ವಶಕ್ಕೆ ಒಪ್ಪಿಸಿರುವ ಘಟನೆ ಅರಕಲಗೂಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಕೇಂದ್ರದಲ್ಲಿ ಹೋಂಡಾ ಡಿಯೋ ಬೈಕ್ ನಲ್ಲಿ ವ್ಯಕ್ತಿ ಓರ್ವ ಸುಮಾರು 30 ಕೆ ಜಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದು ಇದನ್ನು ಶ್ರೀರಾಮ ಸೇನೆ ಹೋಬಳಿ ಘಟಕ ವಿರೋಧಿಸಿ ಪೋಲೀಸ್ ಇಲಾಖೆ ಮಾಹಿತಿ ನೀಡಿದ್ದಾರೆ, ಗೋಮಾಂಸ ಹಾಗೂ ಮಾರಾಟಕ್ಕೆ ಬಳಸಿಕೊಂಡ ಬೈಕ್ ಅನ್ನು ಪೋಲೀಸರಿಗೆ ಒಪ್ಪಿಸಲಾಗಿದೆ.
ಗೋಮಾಂಸವನ್ನು ಪತ್ರಿ ಭಾನುವಾರ ಹಾಗೂ ಗುರುವಾರ ಮಲ್ಲಿಪಟ್ಟಣ ಕೇಂದ್ರ ಭಾಗದಲ್ಲಿ ರಾಜರೋಷವಾಗಿ ಮಾರಾಟ ಮಾಡುತ್ತಿದ್ದರು, ಪೋಲೀಸ್ ಇಲಾಖೆಗೆ ಮಾಹಿತಿ ಇಲ್ಲದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ನಿರಂತರವಾಗಿ ಗೋಮಾಂಸ ದಂಧೆ ನೆಡಯುತ್ತಿದ್ದರು ಪೋಲೀಸ್ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ಮಾತ್ರ ಇಲಾಖೆಯ ಕರ್ತವ್ಯ ನಿಷ್ಠೆಗೆ ಕೈಗನ್ನಡಿ ಹಿಡಿದಂತಾಗಿದೆ.
ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಶ್ರೀರಾಮ ಸೇನೆ ಸಂಘಟನೆಯ ಸದಸ್ಯರು ಪತ್ತೆ ಹಚ್ಚಿ ಪೋಲಿಸರಿಗೆ ಒಪ್ಪಿಸಿದ ಶ್ರೀರಾಮ ಸೇನೆ ಸಂಘಟನೆಯ ಮುಖಂಡರಾದ ಅಮಿತ್, ಮಧು, ಲತೇಶ್, ನಾಗೇಗೌಡ ಈ ಕುರಿತು ಪ್ರಶ್ನಿಸಿದಾಗ ಆರೋಪಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ವಾಹನ ಸಹಿತ 30 ಕೆ.ಜಿ. ಗೋಮಾಂಸವನ್ನು ಪಟ್ಟಣದ ಪೋಲಿಸರಿಗೆ ಒಪ್ಪಿಸಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.