ಬೆಂಗಳೂರು: ಜನವರಿ 26ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಜನವರಿ 16ರಿಂದ 27ರ ವರಗೆ “ಆದಿ ಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯಡಿ 217ನೇ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಇಂದು ಲಾಲ್‍ಬಾಗ್‍ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ 85 ತಳಿಯ ವಿವಿಧ ಹೂಗಳನ್ನು ಬಳಕೆ ಮಾಡಲಾಗಿದ್ದು, ಸುಮಾರು 32 ಲಕ್ಷ ಹೂಗಳಿಂದ ಮಹರ್ಷಿ ವಾಲ್ಮೀಕಿ ಕಾಲಾವಧಿಯಲ್ಲಿ ಶ್ರಮಿಸಿದ ವಿಶೇಷ ಸ್ಥಳಗಳ ಪ್ರಾತ್ಯಕ್ಷಿಕೆಗಳು, ಹಾಗೂ ಹಲವಾರು ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಉದ್ದೇಶಿಸಲಾಗಿದೆ ಎಂದರು.
ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ:
1820ರಲ್ಲಿ ಪ್ರಾರಂಭವಾದ ಅಗ್ರಿ-ಹಾರ್ಟಿಕಲ್ಟರ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಯಾಗಿದ್ದ ವಿಲಿಯಂ ಮನ್ರೊ ಎಂಬ ಅಧಿಕಾರಿಯ ವರದಿಗಳು, 1838-39ರಲ್ಲಿ, ಲಾಲ್‍ಬಾಗ್ ತೋಟದಲ್ಲಿ ವಿವಿಧ ಬಗೆಯ ಪ್ರದರ್ಶನಗಳು ನಡೆದು, ವಿಜೇತರಿಗೆ ಬಹುಮಾನ ವಿತರಣೆಯಾಗಿರುವ ಬಗ್ಗೆ ಉಲ್ಲೇಖಿಸುತ್ತವೆ. 1867ನೇ ಫೆಬ್ರವರಿ 16 ಮತ್ತು 17 ರಂದು ಶನಿವಾರ, ಭಾನುವಾರ, ಎರಡು ದಿನಗಳ ಪ್ರಥಮ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದ ವಿಜೇತರಿಗೆ ಬೆಳ್ಳಿ ಮತ್ತು ಕಂಚಿನ ಬಹುಮಾನಗಳನ್ನು ವಿತರಿಸಲಾಗಿತ್ತು. ಈ ವಿಚಾರಗಳು 1867ರ ಮೈಸೂರು ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟವಾಗಿರುವುದರಿಂದ, ಇದೇ ಲಾಲ್‍ಬಾಗ್‍ನಲ್ಲಿ ನಡೆದ ಪ್ರಥಮ ಫಲಪುಷ್ಪ ಪ್ರದರ್ಶನವಾಗಿದೆ ಎಂದು ತಿಳಿಸಿದರು.
ಲಾಲ್‍ಬಾಗ್‍ನ ಸೂಪರಿಂಟೆಂಡೆಂಟರಾಗಿದ್ದ ಜಾನ್ ಕ್ಯಾಮರಾನ್ ನೇತೃತ್ವದಲ್ಲಿ, ಲಾಲ್‍ಬಾಗ್‍ನಲ್ಲಿ ದೇಶ-ವಿದೇಶಿ ಸಸ್ಯ ಪ್ರಭೇದಗಳನ್ನು ನಮ್ಮ ವಾತಾವರಣಕ್ಕೆ ಹೊಂದಿಸುವ ಮೂಲ ಉದ್ದೇಶದಿಂದ 1889-91ರ ಅವಧಿಯಲ್ಲಿ ಗಾಜಿನ ಮನೆಯನ್ನು ನಿರ್ಮಿಸಲಾಯಿತು. ನಂತರದಲ್ಲಿ ಗಾಜಿನ ಮನೆಯಲ್ಲಿಯೇ ಫಲಪುಷ್ಪ ಪ್ರದರ್ಶನಗಳನ್ನು ಆಯೋಜಿಸಲು ಪ್ರಾರಂಭಿಸಲಾಯಿತು.
ಗಾಜಿನ ಮನೆಯು ಇದುವರೆಗೆ ಸುಮಾರು 216ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಹಾಗೂ ಹಲವಾರು ಐತಿಹಾಸಿಕ ರಾಜ್ಯದ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭಗಳಿಗೆ ವೇದಿಕೆಯಾಗಿ ಪ್ರಸಿದ್ದಿ ಪಡೆದಿದೆ. 1912ನೇ ಇಸವಿಯಲ್ಲಿ ಅಂದಿನ ಲಾಲ್‍ಬಾಗ್ ಮೇಲ್ವಿಚಾರಕರಾಗಿದ್ದ ಜಿ.ಹೆಚ್.ಕೃಂಬಿಗಲ್ ಅವರು ಬೆಂಗಳೂರು ನಗರದ ಪ್ರಮುಖರನ್ನು ಹಾಗೂ ಅಂದಿನ ಮೈಸೂರು ಸಂಸ್ಥಾನದ ತೋಟಗಾರಿಕೆ ಪರಿಣಿತರು ಹಾಗೂ ಉತ್ಸಾಹ ಶಾಲಿಗಳನ್ನು ಸೇರಿಸಿಕೊಂಡು, ಅಲಂಕಾರಿಕ ತೋಟಗಾರಿಕೆಗೆ ಒತ್ತು ನೀಡಲು ಪ್ರಾರಂಭಿಸಿದರು. ಅಂದಿನಿಂದ. ಮೊದಲಿಗೆ ಮೈಸೂರು ಸಂಸ್ಥಾನ, ನಂತರ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಈವರೆಗೆ, 212 ಫಲಪುಷ್ಪ ಪ್ರದರ್ಶನಗಳನ್ನು ಪೂರೈಸಿತ್ತು. ತೋಟಗಾರಿಕೆ ಇಲಾಖೆಯ
ವತಿಯಿಂದ ಆಯೋಜನೆಗೊಂಡ ಹಿಂದಿನ 3 ಪ್ರದರ್ಶನಗಳನ್ನು ಒಳಗೊಂಡಂತೆ ಈವರೆಗೆ 216 ಪ್ರದರ್ಶನಗಳು ಜರುಗಿದ್ದು, ಪ್ರಸ್ತುತ ಪ್ರದರ್ಶನವು 217ನೇ ಪ್ರದರ್ಶನವಾಗಿರುತ್ತದೆ. ಫಲಪುಷ್ಪ ಪ್ರದರ್ಶನದ ಕ್ಷೇತ್ರದಲ್ಲಿ, ರಾಷ್ಟ್ರ ಮಟ್ಟದಲ್ಲಿಯೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಇದೊಂದು ದಾಖಲೆಯಾಗಿದೆ ಎಂದು ತಿಳಿಸಿದರು.
ಅಮೇರಿಕಾ, ಲಂಡನ್‍ನ ‘ಕ್ಯೂ’ ಗಾರ್ಡನ್ನಿನ ರಾಯಲ್ ಬಟಾನಿಕಲ್ ಸೊಸೈಟಿಯು ಆಯೋಜಿಸುವ ‘ಚಲ್ಲಿ’ ಪ್ರದರ್ಶನಗಳನ್ನು ಹೊರತುಪಡಿಸಿದರೆ ಲಾಲ್‍ಬಾಗ್‍ನ ಫಲಪುಷ್ಪ ಪ್ರದರ್ಶನಗಳು ಜಾಗತಿಕವಾಗಿ 3ನೇ ಸ್ಥಾನ ಪಡೆದಿರುವುದು ರಾಷ್ಟ್ರ ಹಾಗೂ ರಾಜ್ಯದ ಹೆಗ್ಗಳಿಕೆಯಾಗಿದೆ.
ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ವರ್ಷಕ್ಕೆ ಎರಡು ಫಲಪುಷ್ಪ ಪ್ರದರ್ಶನ:
ಲಾಲ್‍ಬಾಗ್‍ನಲ್ಲಿ ವರ್ಷಕ್ಕೆ ಎರಡು ಫಲಪುಷ್ಪ ಪ್ರದರ್ಶನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಈ ಪ್ರದರ್ಶನಗಳನ್ನು ‘ಬೇಸಿಗೆ’ ಮತ್ತು ‘ಚಳಿಗಾಲದ’ ಪ್ರದರ್ಶನಗಳೆಂದು ಕರೆಯಲಾಗುತ್ತಿತ್ತು. 1951 ರಿಂದ ಈಚೆಗೆ, ಎರಡು ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಏರ್ಪಡಿಸುವುದರಿಂದ, ಈ ಪ್ರದರ್ಶನಗಳನ್ನು ‘ಗಣರಾಜ್ಯೋತ್ಸವ’ ಮತ್ತು ‘ಸ್ವಾತಂತ್ರೋತ್ಸವ’ ಫಲಪುಷ್ಪ ಪ್ರದರ್ಶನಗಳೆಂದು ಕರೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತ ವಿಶೇಷ ಪ್ರದರ್ಶನಗಳು ವೈಭವ ಪೂರ್ಣವಾಗಿ ಆಯೋಜನೆಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಅಪೂರ್ವ ಸಂಚಲನೆಯನ್ನು ಉಂಟು ಮಾಡಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.
ಈ ಸಾಲಿನ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ “ಆದಿಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯಡಿ 2025ನೇ ಜನವರಿ 16 ರಿಂದ 27 ರವರೆಗೆ 12 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಫಲಪುಷ್ಪ ಪ್ರದರ್ಶನದ ಉದ್ಘಾಟನೆ:
“ಆದಿಕವಿ ಮಹರ್ಷಿ ವಾಲ್ಮೀಕಿ” ಪರಿಕಲ್ಪನೆಯ ಗಣರಾಜ್ಯೋತ್ಸವ 217ನೇ ಫಲಪುಷ್ಪ ಪ್ರದರ್ಶನವನ್ನು ಜನವರಿ 16ರ ಗುರುವಾರ, ಬೆಳಿಗ್ಗೆ 10.00 ಗಂಟೆಗೆ, ಲಾಲ್‍ಬಾಗ್‍ನಲ್ಲಿರುವ ಗಾಜಿನ ಮನೆಯಲ್ಲಿ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅವರು ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರು ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಅವರು ಅತಿಥಿಗಳಾಗಿರುತ್ತಾರೆ. ದಾವಣಗೆರೆ ಜಿಲ್ಲೆಯ ರಾಜನಹಳಿಯ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನು ಸಹ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಉದಯ್ ಬಿ. ಗರುಡಾಚಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಮಾನ್ಯ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ರವರು, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ ಮತ್ತು ರಾಮೋಜಿಗೌಡ ರವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಹಾಗೂ ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆಟ್ರ್ಸ್, ಜಾನೂರು ಮತ್ತು ಪೂರಕ ಕಲೆಗಳ ಪ್ರದರ್ಶನದ ಉದ್ಘಾಟನೆ:
ಫಲಪುಷ್ಪ ಪ್ರದರ್ಶನದ ಜೊತೆಗೆ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನವನ್ನು ತೋಟಗಾರಿಕೆ ಮಾಹಿತಿ ಕೇಂದ್ರ, ಲಾಲ್‍ಬಾಗ್‍ನಲ್ಲಿ ಏರ್ಪಡಿಸಲಾಗಿದೆ. ಜನವರಿ 18ರ ಶನಿವಾರ ಮಧ್ಯಾಹ್ನ 1.00 ಗಂಟೆಗೆ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಿದ್ದ ಚಲನಚಿತ್ರ ನಟಿ ಪ್ರೇಮಾ ಅವರು ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಬಹುಮಾನ ವಿತರಣಾ ಸಮಾರಂಭ:
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಜನವರಿ 24 ರ ಶುಕ್ರವಾರ ಮಧ್ಯಾಹ್ನ 2.30 ಗಂಟೆಗೆ ಲಾಲ್‍ಬಾಗ್‍ನ ಡಾ. ಎಂ.ಹೆಚ್. ಮರಿಗೌಡ ಸ್ಮಾರಕ ಭವನ ಇಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಬಿ. ಗರುಡಾಚಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಡಾ. ಶಮ್ಲಾ ಇಕ್ಬಾಲ್ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿ.ಐ.ಜಿ ಡಾ. ರವಿ ಡಿ. ಚೆನ್ನಣ್ಣನವರ್ ಅವರುಗಳು ಬಹುಮಾನಗಳನ್ನು ವಿತರಿಸಲಿದ್ದಾರೆ.
ನೈರ್ಮಲ್ಯತೆ ಕಾಪಾಡಲು ಪರಿಣಾಮಕಾರಿ ಕ್ರಮಗಳು :
ಲಾಲ್‍ಬಾಗ್ ಸಸ್ಯಶಾಸ್ತ್ರೀಯ ತೋಟದ ನೈರ್ಮಲ್ಯತೆ ಕಾಪಾಡಿ, ಶುದ್ಧ ಪರಿಸರ ನಿರ್ಮಾಣಕ್ಕೆ ಸಹಾಯವಾಗುವಂತೆ ಪ್ರಸ್ತುತ ಫಲಪುಷ್ಪ ಪ್ರದರ್ಶನದಲ್ಲಿ ಕೆಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಲಾಲ್‍ಬಾಗ್‍ನ ಒಳಾಂಗಣದಲ್ಲಿ, ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ, ಬೇರೆಲ್ಲಾ ವಾಹನಗಳ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಓಡಾಟವನ್ನು ಲಾಲ್‍ಬಾಗ್ ಪ್ರವೇಶ ದ್ವಾರಗಳಲ್ಲಿ ಕ್ಲೋಕ್ ರೂಂಗಳ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರವಾಸಿಗರು ಕ್ಯಾಮೆರಾಗಳನ್ನು ಗಾಜಿನಮನೆ ಒಳಗೊಂಡಂತೆ ಲಾಲ್‍ಬಾಗ್‍ನ ಎಲ್ಲಾ ಆಯ್ದ ಪ್ರದೇಶಗಳಲ್ಲಿಯೂ ಬಳಸಬಹುದಾಗಿದೆ.
ಲಾಲ್‍ಬಾಗ್ ಒಳಗಿನ ಯಾವುದೇ ಮಳಿಗೆದಾರರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿμÉೀಧಿಸಿದೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ:
ಒಂದರಿಂದ 10ನೇ ತರಗತಿಯವರೆಗಿನ ಶಾಲಾ ಸಮವಸ್ತ್ರದೊಡನೆ ಬರುವ ಶಾಲಾ ಮಕ್ಕಳಿಗೆ ರಜಾ ದಿನಗಳನ್ನು ಹೊರತುಪಡಿಸಿ ಪ್ರದರ್ಶನದ ಪೂರ್ಣ ಸಮಯದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗುವುದು.
ಹಾಪ್ ಕಾಮ್ಸ್ ವತಿಯಿಂದ ಪ್ರೂಟ್ ಸಲಾಡ್, ಪ್ರೂಟ್ಸ್ ಜ್ಯೂಸ್ ಮತ್ತು ಡ್ರೈಪ್ರೂಟ್ಸ್ ಮಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರು ತಿಳಿಸಿದರು.
ವಿಶೇಷ ರಕ್ಷಣಾ / ಭದ್ರತಾ ಕ್ರಮಗಳು :
ಜನವರಿ 7ರಂದು ಕಾನೂನು ಮತ್ತು ಸುವ್ಯವಸ್ಥೆಯ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೆÇಲೀಸ್ ಆಯುಕ್ತರು, ಟ್ರಾಫಿಕ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಫಲಪುಷ್ಪ ಪ್ರದರ್ಶನದ ಅವಧಿಯಲ್ಲಿ ಕೈಗೊಳ್ಳಬೇಕಾದ ಅವಶ್ಯಕ ಭದ್ರತೆ ಮತ್ತು ರಕ್ಷಣಾ ಕ್ರಮಗಳಿಗೆ ಸಂಬಂಧಿಸಿದಂತೆ ತೋಟಗಾರಿಕೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ.
ಲಾಲ್‍ಬಾಗ್‍ನ ಎಲ್ಲಾ 4 ಪ್ರವೇಶ ದ್ವಾರಗಳು ಮತ್ತು ಗಾಜಿನ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್‍ಪ್ರೇಮ್ ಮೆಟಲ್ ಡಿಟೆಕ್ಟರ್ಸ್ ಗಳನ್ನು ಅಳವಡಿಸಲಾಗುವುದು.
ಎಲ್ಲಾ ಪ್ರವೇಶದ್ವಾರಗಳು, ಗಾಜಿನಮನೆ ಮತ್ತು ಲಾಲ್‍ಬಾಗ್‍ನ ಎಲ್ಲಾ ಆಯ್ದ ಪ್ರದೇಶಗಳಲ್ಲಿ ಹ್ಯಾಂಡ್‍ಹೆಲ್ಡ್ ಮೆಷಿನ್ಸ್‍ಗಳ ಮುಖೇನ ಆಗಮಿಸುವ ಎಲ್ಲಾ ವೀಕ್ಷಕರು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೊಳಿಸಲಾಗುವುದು.
ಲಾಲ್‍ಬಾಗ್‍ನ 4 ಪ್ರವೇಶ ದ್ವಾರಗಳು, ಗಾಜಿನ ಮನೆ ಹಾಗೂ ಸಸ್ಯತೋಟದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಒಟ್ಟಾರೆ 136 ಸಂಖ್ಯೆಯ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
ಅವಶ್ಯಕತೆಗನುಗುಣವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗುತ್ತದೆ. ಹಿರಿಯ ಪೆÇಲೀಸ್ ಅಧಿಕಾರಿಗಳ ತಂಡದಿಂದ ಉಸ್ತುವಾರಿಯನ್ನು ಕೈಗೊಳ್ಳಲಾಗುತ್ತದೆ. ಹೆಚ್ಚುವರಿಯಾಗಿ ಆಂತರಿಕ ಭದ್ರತಾ ಸಿಬ್ಬಂದಿಗಳ ಸೇವೆ, ಹೋಂಗಾರ್ಡ್ ಸೇವೆ ಮತ್ತು ತೋಟಗಾರರ ಸೇವೆಯನ್ನು ಪಡೆಯಲಾಗುವುದು.
ಲಾಲ್‍ಬಾಗ್ ಗಾಜಿನ ಮನೆಯ ಬಳಿ ಹಾಗೂ ಇತರೇ ಆಯ್ದ ಸ್ಥಳಗಳಲ್ಲಿ ಪ್ರತ್ಯೇಕ ಪೊಲೀಸ್ ಔಟ್‍ಪೋಸ್ಟ್ನ್ನು ತೆರೆಯಲಾಗುವುದು. ಲಾಲ್‍ಬಾಗ್‍ನ ಆಯ್ದ 5 ಸ್ಥಳಗಳಲ್ಲಿ ಎತ್ತರದ ಟವರ್ ವೇದಿಕೆಯಿಂದ ಪೊಲೀಸ್ ಕಣ್ಣಾವಲು ಕೈಗೊಳ್ಳಲಾಗುವುದು. ಮುಂಜಾಗ್ರತಾ ಕ್ರಮವಾಗಿ ಒಂದು ಸುಸಜ್ಜಿತ ಅಗ್ನಿಶಾಮಕ ದಳದ ವಾಹನವನ್ನು ಲಾಲ್‍ಬಾಗ್ ಗಾಜಿನ ಮನೆಯ ಬಳಿ ನಿಲುಗಡೆ ಮಾಡಲಾಗುವುದು.
ಸಸ್ಯತೋಟದಲ್ಲಿ ಈಗಾಗಲೇ ಒಟ್ಟು 38 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಕೆಗೆ ಕ್ರಮ :
ಲಾಲ್‍ಬಾಗ್‍ನ ಆಯ್ದ ಪ್ರದೇಶಗಳಲ್ಲಿ 3 ಪ್ಯಾರಾ ಮೆಡಿಕಲ್ ತಂಡವುಳ್ಳ ಮಿನಿ ಆಸ್ಪತ್ರೆಯನ್ನು ತೆರೆದು, ಹಾವು, ಜೇನುಹುಳು, ನಾಯಿಗಳ ಕಚ್ಚುವಿಕೆಗೆ ಸಂಬಂಧಿಸಿದ ಚುಚ್ಚು ಮದ್ದುಗಳನ್ನು ಸಹಾ ಮುನ್ನೆಚ್ಚರಿಕೆಯಾಗಿ ಇರಿಸಲಾಗುವುದು. ಬೆಂಗಳೂರು ಆಸ್ಪತ್ರೆ, ಪಿ.ಎಸ್.ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಮಯ್ಯಾ ಆಸ್ಪತ್ರೆಗಳು ಈ ಸಂಬಂಧ ಸಹಕಾರವನ್ನು ನೀಡಲಿದ್ದಾರೆ.
ಆ್ಯಂಬುಲೆನ್ಸ್‍ಗಳ ಸೇವೆ: ಗಾಜಿನ ಮನೆ ಹಾಗೂ ಲಾಲ್‍ಬಾಗ್‍ನ ಎಲ್ಲಾ 4 ಪ್ರವೇಶ ದ್ವಾರಗಳ ಬಳಿ ಆ್ಯಂಬುಲೆನ್ಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಪ್ರದರ್ಶನದ ಅವಧಿಯಲ್ಲಿ ಜೇನು ನೊಣಗಳು, ಹಾವು, ಬೀದಿ ನಾಯಿಗಳಿಂದ ತೊಂದರೆಯಾಗದಂತೆ ಆಯಾ ಕ್ಷೇತ್ರದ ತಜ್ಞರು ಹಾಗೂ ಅಧಿಕಾರಿಗಳೊಡನೆ ಜನವರಿ 03 ರಂದು ಲಾಲ್‍ಬಾಗ್ ಮತ್ತು ಕಬ್ಬನ್ ಉದ್ಯಾನವನದ ಸಲಹಾ ಸಮಿತಿಯ ಎ.ಎನ್. ಯಲ್ಲಪ್ಪರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ಜರುಗಿದ್ದು, ತಜ್ಞರು ಪ್ರದರ್ಶನಕ್ಕೆ ಬರುವ ವೀಕ್ಷಕರಿಗೆ ಅಗತ್ಯ. ಸಲಹೆಗಳನ್ನು ಪಾಲಿಸಲು ತಿಳಿಸುವಂತೆ ಸೂಚಿಡಿದ್ದು, ಅದರಂತೆ ಲಾಲ್‍ಬಾಗ್ ಒಳಾಂಗಣದ ಎಲ್ಲಾ ಬೀದಿ ನಾಯಿಗಳಿಗೂ ಮುನ್ನೆಚ್ಚರಿಕೆಯಾಗಿ ಆ್ಯಂಟಿರೇಬಿಸ್ ಚುಚ್ಚುಮದ್ದನ್ನು ನೀಡಲಾಗಿದೆ. ವೀಕ್ಷಕರು ಸಹ ನಾಯಿಗಳನ್ನು ಉದ್ರೇಕಗೊಳಿಸಬಾರದು. ಸಾರ್ವಜನಿಕರು ಜೇನುಗೂಡುಗಳಿರುವ ಮರ/ಪ್ರದೇಶದ ಕೆಳಗೆ ಹೊಗೆ ಹಾಕಬಾರದು. ಮೊಬೈಲ್/ ಕ್ಯಾಮೆರಾಗಳಿಂದ ಪ್ಲಾಷ್ ಮಾಡಬಾರದು. ಅತಿಯಾದ ಸೆಂಟ್ ಹಾಕಿದವರು ಹತ್ತಿರ ಹೋಗಬಾರದು. ಅಕಸ್ಮಾತ್ ಜೇನು ನೊಣಗಳು ಕಚ್ಚಿದಲ್ಲಿ ಉಗುರಿನಿಂದ ನೊಣದ ಮುಳ್ಳನ್ನು ತೆಗೆದು ಹಾಕಿ, ಆ ಜಾಗಕ್ಕೆ ಎಂಜಲು ಇಲ್ಲವೇ ಅಲ್ಲೇ ಸಿಗುವ ಯಾವುದಾದರೂ ಸೊಪ್ಪಿನ ರಸದಿಂದ ಉಜ್ಜಬೇಕು.
ಜೇನು/ ಹಾವು/ ನಾಯಿಗಳಿಂದ ದಾಳಿಯಾದಲ್ಲಿ ಲಾಲ್‍ಬಾಗ್ ಒಳಾಂಗಣದ ತುರ್ತುಚಿಕಿತ್ಸಾ ಘಟಕಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆಯುವುದು. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಆ್ಯಂಬ್ಯುಲೆನ್ಸ್ / ಸುಶ್ರೋಷೆಯ ಮುಖೇನ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಜು ಪಟು, ಹಾವು, ನಾಯಿ, ಜೇನುತಜ್ಞರು ಸ್ಥಳದಲ್ಲಿಯೇ ಇರುತ್ತಾರೆ. ಗಾಜಿನ ಮನೆಯ ಹೊರಭಾಗದ ಮಳಿಗೆ ಪ್ರದೇಶದಲ್ಲಿ ಇದೇ ಉದ್ದೇಶಕ್ಕಾಗಿ ಒಂದು ಸಹಾಯ ಕೇಂದ್ರವನ್ನೂ ಸಹಾ ತೆರೆಯಲಾಗಿದೆ ಎಂದು ತಿಳಿಸಿದರು.
ಲಾಲ್‍ಬಾಗ್ ವ್ಯಾಪ್ತಿಯಲ್ಲಿ ಒಣಗಿದ ರೆಂಬೆಗಳು, ಶಿಥಿಲಗೊಂಡಿರುವ ರಚನೆಗಳನ್ನು ತೆರವುಗೊಳಿಸಲು ಹಾಗೂ ಅನಾನುಕೂಲ/ಅಪಾಯ ಉಂಟು ಮಾಡಬಲ್ಲ ಎಲ್ಲ ತೆರನಾದ ಸಮಸ್ಯೆಗಳಿದ್ದಲ್ಲಿ ಮುಂಚಿತವಾಗಿ ಪರಹರಿಸಲು ಲಾಲ್‍ಬಾಗಿನ ಎಲ್ಲಾ ಉಸ್ತುವಾರಿ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆಯನ್ನು ನೀಡಲಾಗಿದ್ದು, ಇದರನ್ವಯ ಕಾರ್ಯನಿರ್ವಹಿಸಲಾಗುತ್ತಿದೆ.
ಕುಡಿಯುವ ನೀರು ಹಾಗೂ ಶೌಚಾಲಯಗಳ ವ್ಯವಸ್ಥೆ:
ಲಾಲ್‍ಬಾಗ್ ಸಸ್ಯತೋಟದಲ್ಲಿ ಪ್ರಸ್ತುತ 10 ಕುಡಿಯುವ ನೀರಿನ ಘಟಕಗಳಿದ್ದು, ಪ್ರದರ್ಶನದ ಅವಧಿಯಲ್ಲಿ ಹೆಚ್ಚುವರಿಯಾಗಿ ಆಯ್ದ 10 ಸ್ಥಳಗಳಲ್ಲಿ ಮಿನರಲ್ ವಾಟರ್ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರು ಉಚಿತವಾಗಿ ಕುಡಿಯುವ ನೀರನ್ನು ಬಳಸಬಹುದಾಗಿದೆ. ಹಾಗೆಯೇ ಸಸ್ಯತೋಟದ ವ್ಯಾಪ್ತಿಯಲ್ಲಿ ಒಟ್ಟಾರೆ ಏಳು ಶೌಚಾಲಯಗಳಿದ್ದು, ಪ್ರದರ್ಶನದ ಅವಧಿಯಲ್ಲಿ ಹೆಚ್ಚುವರಿಯಾಗಿ 5 ಆಯ್ದ ಸ್ಥಳಗಳಲ್ಲಿ ಸಂಚಾರಿ ಶೌಚಾಲಯಗಳ ವ್ಯವಸ್ಥೆಯನ್ನು ಸಹಾ ಕಲ್ಪಿಸಲಾಗುವುದು.
ಪ್ರದರ್ಶನದ ಯಶಸ್ಸಿಗೆ ಸಾರ್ವಜನಿಕರು/ ವೀಕ್ಷಕರಿಂದ ಸಹಕಾರಕ್ಕೆ ಮನವಿ :
ವೀಕ್ಷಣೆಗೆ ಬರುವ ಎಲ್ಲಾ ಪ್ರವಾಸಿಗರು ಯಾವುದೇ ಕೈಚೀಲಗಳನ್ನು ಅಥವಾ ತಿನ್ನುವ ಪದಾರ್ಥಗಳನ್ನು ಲಾಲ್‍ಬಾಗ್‍ನ ಒಳಗಡೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಲಾಲ್‍ಬಾಗ್‍ನ ಎಲ್ಲಾ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ Online payment, Online advance booking ಹಾಗೂ CashPay ಮುಖೇನ ಪ್ರವೇಶ ಟಿಕೆಟ್‍ಗಳನ್ನು ಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಬಾರಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಪ್ರವೇಶ ಟಿಕೆಟ್‍ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6.00 ಗಂಟೆಯಿಂದ 9.00 ಗಂಟೆಯವರೆಗೆ ಹಾಗೂ ಲಾಲ್‍ಬಾಗ್ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ನೀಡಲಾಗುವುದು. ಗಾಜಿನ ಮನೆಯ ಪ್ರವೇಶವು ರಾತ್ರಿ 7.00 ಗಂಟೆಯವರೆಗೆ ಮಾತ್ರವಿರುತ್ತದೆ.
ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಸರ್ವರೂ ಆದಷ್ಟು ಮೆಟ್ರೋರೈಲು ಸೇವೆಯನ್ನು ಬಳಸುವುದು. ಲಾಲ್‍ಬಾಗ್ ವೆಸ್ಟ್ ಗೇಟ್‍ಗೆ ಹೊಂದಿಕೊಂಡಂತೆಯೇ ಮೆಟ್ರೋ ಸ್ಟೇಷನ್ ಇರುವುದರಿಂದ ಹಾಗೂ ಪ್ರದರ್ಶನದ ಸಮಯದಲ್ಲಿ ವಿಶೇಷವಾಗಿ ಹೆಚ್ಚು ಮೆಟ್ರೋರೈಲು ಸಂಚಾರವಿರುವುದರಿಂದ ಎಲ್ಲರೂ ಸಾಧ್ಯವಿದ್ದಷ್ಟೂ ಮೆಟ್ರೋ ರೈಲಿನ ಮೂಲಕವೇ ಆಗಮಿಸುವುದು.
ಫಲಪುಷ್ಪ ಪ್ರದರ್ಶನಕ್ಕೆ ವಾಹನದಲ್ಲಿ ಆಗಮಿಸುವ ವೀಕ್ಷಕರು ಜೋಡಿ ರಸ್ತೆಯ ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ (ಮಲ್ಟಿಸ್ಟೋರಿ ಪಾಕಿರ್ಂಗ್), ಜೋಡಿರಸ್ತೆ ಬಳಿಯ ಹಾಪ್ ಕಾಮ್ಸ್ ಆವರಣ ಹಾಗೂ ಜೆಸಿ ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವವರು ಲಾಲ್‍ಬಾಗ್ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜ್ ಆವರಣದ ನಿಲ್ದಾಣ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದು.
ಸಾರ್ವಜನಿಕರು ಪ್ಲಾಸ್ಟಿಕ್ ಬಳಸದೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಸಸ್ಯತೋಟದ ಇತರೆ ಎಲ್ಲಾ ನಿಯಮಗಳನ್ನು ಪಾಲಿಸುವ ಮುಖೇನ, ಲಾಲ್‍ಬಾಗ್ ಅನ್ನು ಪ್ಲಾಸ್ಟಿಕ್ ಮುಕ್ತ, ಕಸ ಮುಕ್ತ ಹಾಗೂ ವಾಹನ ಮುಕ್ತ ಪರಿಸರಸ್ನೇಹಿ ಪ್ರದೇಶವನ್ನಾಗಿಸಲು ಸರ್ವರೂ ಸಹಕರಿಸಬೇಕು
ಅನುಸರಿಸುವ ಅಂಶಗಳು:
ಲಾಲ್‍ಬಾಗ್ ಫಲಪುಷ್ಪ ಪ್ರದರ್ಶನದ ಸ್ಥಳದಲ್ಲಿ ಹಾಪ್ ಕಾಮ್ಸ್ ಮಳಿಗೆ ಮತ್ತು ಆಯ್ದ ಆಹಾರ ಮಳಿಗೆಗಳು ಮಾತ್ರ ಇರುತ್ತವೆ. ಮಕ್ಕಳಿಗೆ ತಿನ್ನಿಸಿ ಕರೆ ತನ್ನಿರಿ. ಈ ಪ್ರದೇಶದಲ್ಲಿ ತಾಜಾ ಹಣ್ಣುಗಳು, ಹಣ್ಣಿನಜ್ಯೂಸ್, ಒಣ ಹಣ್ಣುಗಳು ಹಾಗೂ ಕುಡಿಯುವ ನೀರು ದೊರೆಯುತ್ತದೆ. ಲಾಲ್‍ಬಾಗ್‍ನ 4 ಪ್ರವೇಶ ದ್ವಾರಗಳ ಬಳಿ ಇರುವ ಕ್ಲೋಕ್ ರೂಂಗಳಲ್ಲಿ ವೀಕ್ಷಕರು ತಮ್ಮ ಬ್ಯಾಗು ಮತ್ತು ಲಗ್ಗೇಜುಗಳನ್ನು ಇಡಬಹುದು. ಕ್ಯಾಮೆರಾ, ಮೊಬೈಲ್‍ಗಳನ್ನು ತಮ್ಮೊಡನೆ ತೆಗೆದುಕೊಂಡು ಒಳಗೆ ಬರಬಹುದು. ರಜಾ ದಿನಗಳಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ಇತರೇ ಸಾಮಾನ್ಯ ದಿವಸಗಳಲ್ಲಿ ಮಕ್ಕಳನ್ನು ಪ್ರದರ್ಶನಕ್ಕೆ ಕರೆ ತರುವುದು. ವೀಕ್ಷಕರು ಲಾಲ್‍ಬಾಗ್ ಸಸ್ಯತೋಟದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕೋರಿದೆ.
ಅನುಸರಿಸಬಾರದ ಅಂಶಗಳು :
ಲಾಲ್‍ಬಾಗ್ ಸಸ್ಯತೋಟಕ್ಕೆ ಯಾವುದೇ ರೀತಿಯ ತಿಂಡಿ- ತಿನಿಸುಗಳನ್ನು ತರುವುದನ್ನು ನಿಷೇಧಿಸಿದೆ. ಲಾಲ್‍ಬಾಗ್‍ನ ಒಳಗೆ ಯಾವುದೇ ಪ್ಲಾಸ್ಟಿಕ್ ಕೈ ಚೀಲಗಳನ್ನು ತರುವುದು ಇಲ್ಲವೇ ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಚಿನ್ನದ ಆಭರಣಗಳನ್ನು ಧರಿಸಿ ಬರುವುದು ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ತಮ್ಮೊಡನೆ ತರುವುದನ್ನು ಆದಷ್ಟು ಕಡಿಮೆ ಮಾಡುವುದು. ಬ್ಯಾಗು ಇಲ್ಲವೇ ಯಾವುದೇ ರೀತಿಯ ಲಗ್ಗೇಜನ್ನು ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ಲಾಲ್‍ಬಾಗ್ ಒಳಾಂಗಣಕ್ಕೆ ತರುವುದನ್ನು ನಿಷೇಧಿಸಿದೆ.
ಸಸ್ಯತೋಟದ ಗಿಡ / ಹೂಗಳನ್ನು ಕೀಳದಿರಿ.
ಮಕ್ಕಳು ಇಲ್ಲವೇ ವಯಸ್ಕರು ಲಾಲ್‍ಬಾಗ್‍ನ ಒಳಗೆ ಯಾವುದೇ ರೀತಿಯ ಆಟಗಳನ್ನು ಆಡುವುದನ್ನು ನಿಷೇಧಿಸಿದೆ. ಲಾಲ್‍ಬಾಗ್ 4 ಪ್ರವೇಶದ್ವಾರಗಳಲ್ಲಿ ಬೇರೆಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಲಾಲ್‍ಬಾಗ್ ಡಬಲ್ ರೋಡ್ ದ್ವಾರದಿಂದ ಆಗಮಿಸುವ ಶಾಲಾ ಕಾಲೇಜು ವಾಹನಗಳು, ವಿಕಲಚೇತನರ ವಾಹನಗಳು, ಆ್ಯಂಬುಲೈನ್ಸ್ ಫೈರ್ ಬ್ರಿಗೇಡ್,ಪೊಲೀಸ್, ಸುದ್ದಿ ಮಾಧ್ಯಮ ಹಾಗೂ ಇಲಾಖಾ ವಾಹನಗಳನ್ನು ಹತಿರದ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನದ ಅವಧಿಯಲ್ಲಿ ಲಾಲ್‍ಬಾಗ್‍ಗೆ ಬರುವ ವಾಯುವಿಹಾರಿಗಳ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಬರ್ಂಧಿಸಲಾಗಿದೆ.
ಲಾಲ್‍ಬಾಗ್ ಅನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಪರಿಸರ ಸ್ನೇಹಿಯಾಗಿಸಲು ಸಹಕರಿಸಿ:
ಪ್ಲಾಸ್ಟಿಕ್ ನೀರಿನ ಬಾಟಲ್/NWPP ಗಳು/ಬ್ಯಾಗ್ಸ್‍ಗಳನ್ನು ನಿμÉೀಧಿಸಿದೆ. ಉಪಯೋಗಿಸಿ ಬಿಸಾಡುವ ಬಾಟಲ್‍ಗಳನ್ನು ತನ್ನಿರಿ ಲಾಲ್‍ಬಾಗ್ ಒಳಭಾಗದಲ್ಲಿ ಕುಡಿಯುವ ನೀರಿನ ರೀಫಿಲ್ ಕೇಂದ್ರಗಳಿರುತ್ತವೆ. ಲಾಲ್‍ಬಾಗ್‍ನ ಎಲ್ಲಾ 4 ಪ್ರವೇಶ ದ್ವಾರಗಳಲ್ಲಿ ತಪಾಸಣೆ ಮಾಡಲಾಗುವುದು ಮೇಲ್ಕಂಡ ಪ್ಲಾಸ್ಟಿಕ್ ವಸ್ತುಗಳ ಜೊತೆಗೆ ಥರ್ಮೋಕೋಲ್ ಪ್ಲೇಟ್ಸ್, ಬೌಲ್ಸ್, ಕಪ್ಸ್, ಸ್ಪೂನ್‍ಗಳನ್ನು ಸಹಾ ನಿಷೇಧಿಸಿದೆ. ಮರುಬಳಕೆ ಮಾಡಬಲ್ಲ ಬ್ಯಾಗ್‍ಗಳನ್ನು ತರಬಹುದಾಗಿದೆ. ಫುಡ್ ಜೋನ್‍ಗಳಲ್ಲಿ ಮಾತ್ರ ಕಟ್ ಫ್ರಟ್ಸ್ ಹಾಗೂ ಇತರೇ ತಿನಿಸುಗಳನ್ನು ಬಳಸುವುದು ಸಸ್ಯತೋಟದ ಇತರೇ ಪ್ರದೇಶಗಳನ್ನು ಈ ಉದ್ದೇಶಕ್ಕೆ ಬಳಸಬಾರದು.
ಇತ್ತೀಚೆಗೆ ಕಾಣಿಸುತ್ತಿರುವ HMPV ವೈರಸ್ ಸೊಂಕಿನ ಹಿನ್ನೆಲೆಯಲ್ಲಿ ಆದಷ್ಟು ಸ್ವಚ್ಚತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡುವುದು. ಸಾರ್ವಜನಿಕ ಸ್ಥಳಗಳು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ನಿಭರ್ಂದಿಸಿದೆ. ಪ್ರವಾಸಿಗರು / ವೀಕ್ಷಕರು ಹುಲ್ಲುಹಾಸು / ರಸ್ತೆಗಳು ಹಾಗೂ ಎಲ್ಲೆಂದರಲ್ಲಿ ಕಸ/ತ್ಯಾಜ್ಯವನ್ನು ಎಸೆಯಬಾರದು. ಹತ್ತಿರದ ಡಸ್ಟ್ ಬಿನ್ಸ್‍ಗಳನ್ನು ಬಳಸುವುದು.
ಆನ್‍ಲೈನ್ ಟಿಕೆಟ್ ಬುಕ್ಕಿಂಗೆ ವ್ಯವಸ್ಥೆ:
ಮುಂಗಡ ಆನ್‍ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯವಿದೆ. ಟಿಕೆಟ್ ಬುಕ್ ಮಾಡಲು https://hasiru.karnataka.gov.in/floweshow/login.aspx ಗೆ ಭೇಟಿ ನೀಡಿ ಆನ್‍ಲೈನ್ ಟಿಕೆಟ್ ಬುಕ್ ಮಾಡುವ ಮೂಲಕ ಸರತಿ ಸಾಲುಗಳನ್ನು ತಪ್ಪಿಸಿ, ಟಿಕೆಟ್/ಮೊಬೈಲ್ ನಲ್ಲಿ ಕ್ಯೂಆರ್ ಕೋಡ್ ಇ-ಪ್ರತಿಯನ್ನು ತೋರಿಸಿ, ಪುಷ್ಪ ಪ್ರದರ್ಶನಕ್ಕೆ ನೇರ ಪ್ರವೇಶ ಪಡೆಯಬಹುದು ಎಂದು ತಿಳಿಸಿದರು.