ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ʼಲಕ್ಕುಂಡಿ : ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರ ಸಿದ್ಧಗೊಂಡಿದೆ.
— CM of Karnataka (@CMofKarnataka) January 22, 2025
ಕರ್ನಾಟಕದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸುವ ಈ ಸ್ತಬ್ಧಚಿತ್ರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಶ್ರೀ ಹೇಮಂತ್… pic.twitter.com/Iq3uemQtLi
ಬೆಂಗಳೂರು: ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಕರ್ನಾಟಕ ಸರ್ಕಾರದ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು’ ಸ್ತಬ್ಧಚಿತ್ರ ಸಜ್ಜಾಗಿದೆ.
ಈ ಸ್ತಬ್ಧಚಿತ್ರವು ಕರ್ನಾಟಕದ ಐತಿಹಾಸಿಕ ಹೆಮ್ಮೆಯ ಜೊತೆಗೆ ಸರ್ವಧರ್ಮ ಸಮನ್ವಯ, ಶಾಂತಿ, ಮತ್ತು ಸಹಬಾಳ್ವೆಯ ಸಂದೇಶವನ್ನು ಪ್ರತಿಪಾದಿಸುತ್ತದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಶ್ರೀ ಹೇಮಂತ್ ಎಂ. ನಿಂಬಾಳ್ಕರ್ ಅವರು ಇಂದು ಈ ಸ್ತಬ್ಧಚಿತ್ರವನ್ನು ವೀಕ್ಷಿಸಿದರು.
‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು’ ಸ್ತಬ್ಧಚಿತ್ರವು ರಾಜ್ಯದ ಶ್ರೀಮಂತ ಶಿಲ್ಪಕಲೆಯ ವೈಭವವನ್ನು ದೇಶದ ಮುಂದೆ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.