ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಪ್ರದೇಶದ ಅಭಿವೃದ್ಧಿಗಾಗಿ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ₹5000 ಕೋಟಿ ವಿಶೇಷ ಅನುದಾನವನ್ನು ಒದಗಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಖರ್ಗೆ ಅವರ ಪತ್ರದ ಮುಖ್ಯ ಅಂಶಗಳು:
- ಕಲ್ಯಾಣ ಕರ್ನಾಟಕ ಪ್ರದೇಶವು ಶೈಕ್ಷಣಿಕ, ಆರೋಗ್ಯ, ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಹಿಂದುಳಿದಿದ್ದು, ಈ ಅಭಿವೃದ್ದಿಗೆ ನಿರಂತರ ಆರ್ಥಿಕ ಬೆಂಬಲ ಅಗತ್ಯ.
- 2013ರಲ್ಲಿ ಯುಪಿಎ ಸರ್ಕಾರವು ಸಂವಿಧಾನದ 371(ಜೆ) ತಿದ್ದುಪಡಿ ಮಾಡಿ, ಈ ಭಾಗಕ್ಕೆ ವಿಶೇಷ ಸೌಲಭ್ಯ ನೀಡಲು ಹೆಜ್ಜೆ ಹಾಕಿತ್ತು.
- ಕರ್ನಾಟಕ ಸರ್ಕಾರವು ಈ ಪ್ರದೇಶದ ಅಭಿವೃದ್ಧಿಗಾಗಿ ವಾರ್ಷಿಕ ₹5000 ಕೋಟಿ ಅನುದಾನ ನಿಗದಿಪಡಿಸಿದ್ದು, 2024-25ರ ಆರ್ಥಿಕ ವರ್ಷಕ್ಕೂ ಇದು ಅನ್ವಯವಾಗಲಿದೆ.
- ಮುಖ್ಯ ಯೋಜನೆಗಳು:
- ಖಾಲಿ ಇರುವ 17,439 ಸರ್ಕಾರಿ ಹುದ್ದೆಗಳ ಭರ್ತಿ
- ಬೀದರ್ ಮತ್ತು ರಾಯಚೂರು ನಗರ ಪಾಲಿಕೆಗಳ ಮೇಲ್ದರ್ಜೆ
- 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ಸ್ಥಾಪನೆ
- 31 ಪಿಎಚ್‌ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ (CHC) ಮತ್ತು 9 CHCಗಳನ್ನು ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆ
- 2 ತಾಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಗಳಾಗಿ ಅಭಿವೃದ್ಧಿಪಡಿಸುವ ಯೋಜನೆ
ಈ ಅಭಿವೃದ್ದಿ ಯೋಜನೆಗಳ ಯಶಸ್ವೀ ಜಾರಿಗೆ ಕೇಂದ್ರ ಸರ್ಕಾರದಿಂದ ನಿರಂತರ ಆರ್ಥಿಕ ನೆರವು ಅಗತ್ಯವಿದ್ದು, ಕರ್ನಾಟಕ ಸರ್ಕಾರವೂ ಈ ಸಲ ₹5000 ಕೋಟಿ ವಿಶೇಷ ಅನುದಾನಕ್ಕೆ ಒತ್ತಾಯಿಸುವ ನಿರ್ಧಾರ ಕೈಗೊಂಡಿದೆ.
ಖರ್ಗೆ ಅವರ ಈ ಪತ್ರದ ಬೆನ್ನಲ್ಲೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಪ್ರಸ್ತಾಪ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಈ ಬೇಡಿಕೆ ಕೇಂದ್ರ ಬಜೆಟ್‌ನಲ್ಲಿ ಅನುಮೋದನೆ ಪಡೆಯುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.