ಬಿಬಿಎಂಪಿ ಇ-ಖಾತಾ 22 ಲಕ್ಷ ಆಸ್ತಿಗಳು ಲಭ್ಯವಿದೆ https://bbmpeaasthi.karnataka.gov.in
ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ಬಿಬಿಎಂಪಿಯು ಎಲ್ಲಾ ಬೆಂಗಳೂರಿಗರಿಗೆ ತಮ್ಮ ಸ್ವತ್ತುಗಳ ಬಿಬಿಎಂಪಿ ಇ-ಖಾತಾಗಳನ್ನು ನೀಡಲು ಸುಮಾರು 22-ಲಕ್ಷ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಇರಿಸಲಾಗಿರುತ್ತದೆ. ಎಲ್ಲಾ ನಾಗರೀಕರು ತಮ್ಮ ಬಿಬಿಎಂಪಿ ಇ-ಖಾತಾ ಪಡೆಯಲು ವಿನಂತಿಸಲಾಗಿದೆ.
ಬಿಬಿಎಂಪಿಯ ಇ-ಖಾತಾ ಈಗ ನಾಗರೀಕರ ನಿಯಂತ್ರಣದಲ್ಲಿದೆ ಹಾಗೂ ಪ್ರತಿಯೊಬ್ಬರಿಗೂ ಬಿಬಿಎಂಪಿಯ ಇ-ಖಾತಾವನ್ನು ಪಾಲಿಕೆ ಜಾಲತಾಣ https://bbmpeaasthi.karnataka.gov.in ರಲ್ಲಿ ಪಡೆಯಲು ಪಾಲಿಕೆಯಲ್ಲಿ ಸಂಪರ್ಕರಹಿತ, ಫೇಸ್‌ಲೆಸ್, ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ನಿಮ್ಮ ಆಸ್ತಿ ಇ-ಖಾತಾ ಆನ್‌ಲೈನ್‌ನಲ್ಲಿದೆ ಮತ್ತು ಅದನ್ನು ಸರಾಗವಾಗಿ ಈ ಕೆಳಗಿನಂತೆ ಪಡೆಯಿರಿ:
- ನಿಮ್ಮ ಕರಡು ಇ-ಖಾತಾವನ್ನು ವಾರ್ಡ್ ವಾರು ಪಟ್ಟಿಯಲ್ಲಿ ಹುಡುಕಿ. (ನಿಮ್ಮ ವಾರ್ಡ್ ಅನ್ನು ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ತಿಳಿದುಕೊಳ್ಳಿ)
- ಈ ಕೆಳಗಿನ ಮಾಹಿತಿಗಳನ್ನು ಆನ್‌ಲೈನ್ ನಲ್ಲಿ ನಮೂದಿಸಿ ನಿಮ್ಮ ಅಂತಿಮ ಇ-ಖಾತಾವನ್ನು ಮುದ್ರಿಸಿಕೊಳ್ಳಿ
- ಆಧಾರ್
- ಆಸ್ತಿ ತೆರಿಗೆ ID
- ಕ್ರಯ/ನೊಂದಾಯಿತ ಪತ್ರ ಸಂಖ್ಯೆ
- ಬೆಸ್ಕಾಂ ID (ಖಾಲಿ ನಿವೇಶನ ಆಯ್ಕೆ)
- ಅಪೂರ್ಣ ಮಾಹಿತಿ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿದ್ದಲ್ಲಿ ಮಾತ್ರ ಪ್ರಕರಣಗಳು ನಿರ್ಧಾರಕ್ಕಾಗಿ ಎಆರ್‌ಒಗಳಿಗೆ ರವಾನೆಯಾಗುತ್ತದೆ.
ನಾಗರೀಕರು ತರಬೇತಿ ವೀಡಿಯೊಗಳನ್ನು ನೋಡಬಹುದು:-
ENGLISH VERSION: https://youtu.be/GL8CWsdn3wo
ಕನ್ನಡ ಆವೃತ್ತಿ:https://youtu.be/JR3BxET46po
ಯೂನಿವರ್ಸಲ್ ಇ-ಖಾತಾ ಸಹಾಯ ವಾಣಿ ಸಂಖ್ಯೆ: 94806 83695