ಹುಬ್ಬಳ್ಳಿಯ ಘೋಡಕೆ ಫ್ಲ್ಯಾಟ್‌ನಲ್ಲಿ ಸೋಮವಾರ ರಾತ್ರಿ ತಂದೆ ಮಗನ ಮೇಲೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಲ್ಲದೇ ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಆರೋಪಿಯ ಮೇಲೆ ಹಳೇ ಹುಬ್ಬಳ್ಳಿ ಪೋಲಿಸರು ಫೈರಿಂಗ್ ಮಾಡಿ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
ಜಾವೇದ್ ಹಾಗೂ ಮುಜಾಮೀಲ್ ಕುಟುಂಬದವರ ನಡುವೆ ಚಿಕ್ಕ ಮಕ್ಕಳ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯ ಮೆಟ್ಟಿಲಿರಿತ್ತು. ಆದರೆ ಎರಡು ಕುಟುಂಬಗಳ ನಡುವೆ ಹಿರಿಯರು ಮಧ್ಯಸ್ಥಿಕೆ ವಹಿಸಿ ಜಗಳ ಬಗೆ ಹರಿಸಿದ್ದರು. ಆದರೆ ನಿನ್ನೆ ಮತ್ತೆ ಈ ಜಗಳ ವಿಕೋಪಕ್ಕೆ ಹೋದ ಪರಿಣಾಮ ಮುಜಾಮೀಲ್ ಚಾಕು ತಂದು ಜಾವೇದ್ ಹಾಗೂ ಸಮೀರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾ ಇತ್ತ ಗಾಯಗೊಂಡಿದ್ದ ತಂದೆ ಮಗನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಘಟನೆಯ ಮಾಹಿತಿ ಆಧರಿಸಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾದಾಗಿದ್ದಾರೆ. ಆಗ ಆರೋಪಿ ಮುಜಾಮೀಲ್ ಇರುವ ಸ್ಥಳದ ಬಗ್ಗೆ ಮಾಹಿತಿ ತಿಳಿದು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದೆ ಎನ್ನಲಾಗಿದೆ. ಹೀಗಾಗಿ ಹಳೇ ಹುಬ್ಬಳ್ಳಿ ಠಾಣೆಯ ಇನ್ಸೆಕ್ಟರ್ ಸುರೇಶ್ ಯಳ್ಳುರ ಆತ್ಮ ರಕ್ಷಣೆಗೆ ಮುಜಾಮೀಲ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇನ್ಸೆಕ್ಟರ್ ಹೆಡ್ ಕಾನ್ಸಟೆಬಲ್ ಬಲಗೈಗೆ ಗಂಭೀರವಾಗಿ ಗಾಯವಾಗಿದೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ವರ್ಷದ ಮುನ್ನ ದಿನವೇ ಪೊಲೀಸರ ಗನ್ ಸದ್ದು ಮಾಡಿದ್ದು, ಸುಖಾಸುಮ್ಮನೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸವನ್ನು ಮಾಡುವವರಿಗೆ ಹುಬ್ಬಳ್ಳಿ ಪೋಲಿಸರು ತಕ್ಕ ಪಾಠ ಕಲಿಸಿದ್ದಾರೆ.