Tuesday, August 25, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News

ಕೆ.ಹೆಚ್. ಪಾಟೀಲರು ನನಗೆ ಮೊದಲ ಬಿ-ಫಾರಂ ನೀಡಿ ಅವಕಾಶ ಕಲ್ಪಿಸಿದರು ಡಿ.ಕೆ. ಶಿವಕುಮಾರ್:

PREM SHEKHAR PV by PREM SHEKHAR PV
5 months ago
Reading Time: 2 mins read
A A
18
SHARES
50
VIEWS

ಬೆಂಗಳೂರು: ಕೆ.ಹೆಚ್. ಪಾಟೀಲ್ ಅವರು ತಮಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಬಿ-ಫಾರಂ ನೀಡಿ ರಾಜಕೀಯ ಪಯಣ ಆರಂಭಿಸಲು ಅವಕಾಶ ಕಲ್ಪಿಸಿದ್ದು ಅವರಿಗೆ ಇಂದಿನ ಸ್ಥಾನಮಾನ ಸಿಗಲು ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ನಡೆದ ಮಾಜಿ ಸಚಿವ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ.ಹೆಚ್. ಪಾಟೀಲ್ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಟೀಲರು, ವೀರಪ್ಪ ಮೊಯ್ಲಿ ಹಾಗೂ ದೆಹಲಿ ನಾಯಕರು ತಮ್ಮನ್ನು ಗುರುತಿಸಿ ಬಿ-ಫಾರಂ ನೀಡಿದ್ದಕ್ಕೆ ಇಂದಿನ ಸ್ಥಿತಿಗೆ ಬರಲು ಸಾಧ್ಯವಾಯಿತು ಎಂದರು.

“ಪಾಟೀಲರಿಗೂ ನನಗೂ 37 ವರ್ಷಗಳ ಅಂತರವಿದೆ. ನಾನು ಅವರ ಜೊತೆ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಾಟೀಲರು ಅಧ್ಯಕ್ಷರಾಗಿದ್ದಾಗ ಹಾಗೂ ವೀರಪ್ಪ ಮೊಯ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಇಬ್ಬರೂ ಸೇರಿ ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದರು. ನಂತರ ಅವರ ಜೊತೆ ಶಾಸಕ, ಪಕ್ಷದ ಕಾರ್ಯದರ್ಶಿ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ” ಎಂದು ಶಿವಕುಮಾರ್ ವಿವರಿಸಿದರು.

ಪಾಟೀಲರ ಆಚಾರ-ವಿಚಾರಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದ ಅವರು, “ಇಟ್ಟರೆ ಸಗಣಿಯಾಗು, ತಟ್ಟಿದರೆ ಬೆರಣಿಯಾಗು, ಸುಟ್ಟರೆ ಹಣೆಗೆ ವಿಭೂತಿಯಾಗು” ಎಂಬ ಗೋವಿನ ಹಾಡು ಆಗಾಗ್ಗೆ ನೆನಪಾಗುತ್ತದೆ ಎಂದು ಹೇಳಿದರು. ಪಾಟೀಲರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಶ್ಲಾಘಿಸಿದರು.

ಅರಣ್ಯ ಸಚಿವರಾಗಿದ್ದ ಪಾಟೀಲರು ರೈತರ ಬದುಕು, ಅರಣ್ಯ ರಕ್ಷಣೆ ಹಾಗೂ ಸಹಕಾರ ಕ್ಷೇತ್ರದಲ್ಲಿ ದೂರದೃಷ್ಟಿ ತೋರಿದ್ದರು. “ಒಂದು ಊರಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ ಇರಬೇಕು” ಎಂಬ ಸಹಕಾರ ತತ್ವವನ್ನು ಬೆಳೆಸಿದವರು ಎಂದು ಉಪಮುಖ್ಯಮಂತ್ರಿ ತಿಳಿಸಿದರು.

ಚುನಾವಣೆ ಟಿಕೆಟ್ ನೀಡುವಾಗ ಕೆಲವರ ಭಿನ್ನಾಭಿಪ್ರಾಯ ಇತ್ತು ಆದರೆ ದೆಹಲಿಯ ನಾಯಕರು ತೀರ್ಮಾನ ಮಾಡಿದರು. ಪಾಟೀಲರು ತಮ್ಮನ್ನು ಕರೆಸಿ “ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೀಯಾ?” ಎಂದು ಕೇಳಿ ನಂತರ ಬಿ-ಫಾರಂಗೆ ಸಹಿ ಹಾಕಿಕೊಟ್ಟರು ಎಂದು ಶಿವಕುಮಾರ್ ನೆನಪಿಸಿಕೊಂಡರು. ಅಲ್ಲಿಂದ ತಮ್ಮ ರಾಜಕೀಯ ಪಯಣ ಆರಂಭವಾಯಿತು ಎಂದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು-ಸಾವಿನ ಮಧ್ಯೆ ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ ಎಂದ ಅವರು, ಅಧಿಕಾರದಲ್ಲಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತೇವೆ ಎಂಬುದು ಮಹತ್ವದ್ದು ಎಂದರು. ಪಾಟೀಲರು ಅನೇಕ ನಾಯಕರನ್ನು ಬೆಳೆಸಿದ್ದಾರೆ ಎಂದು ಹೇಳಿದರು.

ಪಾಟೀಲರ ಧೈರ್ಯ, ದಿಟ್ಟ ನಾಯಕತ್ವ ಸ್ಫೂರ್ತಿಯಾಗಿದೆ. ಹೆಚ್.ಕೆ. ಪಾಟೀಲ್ ಅವರಲ್ಲಿ ತಂದೆಯಂತಹ ಧೈರ್ಯ ಇಲ್ಲದಿದ್ದರೂ ಉಳಿದ ಗುಣಗಳಿವೆ ಎಂದು ಉಲ್ಲೇಖಿಸಿದರು. ಕೃಷ್ಣ ಅವರ ನಂತರ ಹೆಚ್.ಕೆ. ಪಾಟೀಲ್ ನಾಯಕರಾಗುತ್ತಾರೆ ಎಂದು ಭಾವಿಸಿದ್ದೆ ಎಂದರು.

ದೇವರು ವರ-ಶಾಪ ನೀಡುವುದಿಲ್ಲ, ಕೇವಲ ಅವಕಾಶ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ಒಳ್ಳೆಯದನ್ನು ಮಾಡುವುದು ಮುಖ್ಯ ಎಂದು ಡಿ.ಕೆ. ಶಿವಕುಮಾರ್ ಮಾತು ಮುಗಿಸಿದರು.

ಈ ಕಾರ್ಯಕ್ರಮದಲ್ಲಿ ಪಾಟೀಲರ ಶಿಷ್ಯಕೋಟಿ, ಕಾಂಗ್ರೆಸ್ ನಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags: KarnatakaKarnataka Newsnews

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ಗಿರಿಜನ ಭಾಷೆಗಳ ಸಂರಕ್ಷಣೆಗೆ ತಂತ್ರಜ್ಞಾನದ ಬಲ: ‘ಜಾಗೋ’ ಎಐ ಸಹಾಯಕ, ಹೊಸ ‘ಆದಿ ವಾಣಿ’ ವೇದಿಕೆ ಬಿಡುಗಡೆ

August 24, 2026

ಬರ ಪರಿಸ್ಥಿತಿ: ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರದಿಂದ ಸಮಗ್ರ ಸಿದ್ಧತೆ – ಡಾ. ಜಿ. ಪರಮೇಶ್ವರ್

August 24, 2026

ರಾಸಾಯನಿಕ–ಪೆಟ್ರೋಕೆಮಿಕಲ್ಸ್ ವಲಯಕ್ಕೆ 2040ರ ವೇಳೆಗೆ 1 ಟ್ರಿಲಿಯನ್ ಡಾಲರ್ ಗುರಿ: ಜೆ.ಪಿ. ನಡ್ಡಾ

August 24, 2026

ಮಾಧ್ಯಮದವರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ನೆರವು: ಸಿಎಂ ಡಿ.ಕೆ. ಶಿವಕುಮಾರ್

August 23, 2026

Recent News

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಚಿವ ಟಿ. ರಘುಮೂರ್ತಿಯಿಂದ ಕಟ್ಟುನಿಟ್ಟಿನ ನಿರ್ದೇಶನ:

August 17, 2026

ನಾಗೇಂದ್ರರನ್ನು ಸಂಪುಟದಿಂದ ತಕ್ಷಣ ಕೈಬಿಡಿ: ಬಿ.ವೈ. ವಿಜಯೇಂದ್ರ

August 17, 2026

ಎಸ್‌ಐಆರ್ ಲೋಪದೋಷಗಳ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್‌ಗೆ ಪ್ರಕಾಶ್ ರಾಜ್ ನೇತೃತ್ವದ ನಿಯೋಗ ಮನವಿ

August 17, 2026

ಹನೂರು ಎನ್‌ಕೌಂಟರ್ ಬಗ್ಗೆ ಗಂಭೀರ ಅನುಮಾನ; ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು: ಬಿ.ವೈ. ವಿಜಯೇಂದ್ರ

August 17, 2026
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.