ಕೌಲಾಲಂಪುರ್: ಕರ್ನಾಟಕ ವಿಧಾನಸಭಾಧ್ಯಕ್ಷ ಮತ್ತು ಕಾಮನ್‌ವೆಲ್ತ್ ಸಂಸದೀಯ ಸಂಘದ ಕರ್ನಾಟಕ ಶಾಖೆಯ ಜಂಟಿ ಅಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಮಲೇಶಿಯಾದಲ್ಲಿ ನಡೆಯುತ್ತಿರುವ ಅಧ್ಯಯನ ಪ್ರವಾಸದ ವೇಳೆ, ಇಂದು ಕೌಲಾಲಂಪುರದ ಸಂಸತ್ ಭವನದಲ್ಲಿ ಮಲೇಶಿಯಾದ ಜನ ಪ್ರತಿನಿಧಿಗಳ ಸಭೆ (ದಿವಾನ್ ರಖ್ಯತ್) ಅಧ್ಯಕ್ಷ ಹಾಗೂ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್‌ನ ಮಲೇಶಿಯಾ ಶಾಖೆಯ ಜಂಟಿ ಅಧ್ಯಕ್ಷ ಡಾ.ಜೋಹರಿ ಬಿನ್ ಅಬ್ದುಲ್ ಅವರನ್ನು ಭೇಟಿಯಾದರು.
ಈ ಸಭೆಯಲ್ಲಿ ಯು.ಟಿ.ಖಾದರ್ ಫರೀದ್ ಅವರು ಸಂಸದೀಯ ವ್ಯವಹಾರಗಳು, ಪ್ರಜಾಪ್ರಭುತ್ವ ತತ್ವಗಳು ಮತ್ತು ಉಭಯ ರಾಷ್ಟ್ರಗಳ ನಡುವಿನ ರಾಜಕೀಯ, ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ವಿಚಾರ ವಿನಿಮಯ ನಡೆಸಿದರು. ಭವಿಷ್ಯದಲ್ಲಿ ಕರ್ನಾಟಕ ಮತ್ತು ಮಲೇಶಿಯಾ ನಡುವಿನ ಸಂಸದೀಯ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದವು.
ಸಭೆಯಲ್ಲಿ ಸಂಬಂಧಪಟ್ಟ ಉಭಯ ರಾಷ್ಟ್ರಗಳ ಅಧಿಕಾರಿಗಳು ಉಪಸ್ಥಿತರಿದ್ದರು.












