Tuesday, September 22, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News Law & Order

ಸ್ವಾತಿ ಬ್ಯಾಡಗಿ ನಿವಾಸಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ

ಪೊಲೀಸರಿಂದ ಲೋಪವಾಗಿದೆ. ಸಂಪೂರ್ಣ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ:ಬಸವರಾಜ ಬೊಮ್ಮಾಯಿ

SP by SP
2 years ago
Reading Time: 1 min read
A A
18
SHARES
50
VIEWS

ಹಾವೇರಿ(ರಟ್ಟಿಹಳ್ಳಿ) ಇತ್ತೀಚೆಗೆ ಹತ್ಯೆಗೀಡಾಗಿದ್ದ ಸ್ವಾತಿ ಬ್ಯಾಡಗಿ ಪ್ರಕರಣದಲ್ಲಿ ಪೊಲೀಸರಿಂದ ಲೋಪವಾಗಿದೆ ಈ ಬಗ್ಗೆ ಸಂಪೂರ್ಣ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಶನಿವಾರ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಿ ಬ್ಯಾಡಗಿ ಹತ್ಯೆ ಆಘಾತ ಉಂಟು ಮಾಡಿದೆ. ಸ್ವಾತಿಯವರ ತಾಯಿ ಸಣ್ಣ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡಿದ್ದಾರೆ. ಕಷ್ಟ ಪಟ್ಟು ತಮ್ಮ ಮೂರು ಮಕ್ಕಳನ್ನು ಬೆಳೆಸಿದ್ದಾರೆ. ಚೆನ್ನಾಗಿ ಓದಿಸಿದ್ದಾರೆ. ಅವರು ಕೆಲಸ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಸಾಮಾಜಿಕ ಪಿಡುಗಾಗಿದೆ. ಬೆಳೆಯುವ ವಯಸ್ಸಿನ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ ಬೇರೆ ಬೇರೆ ಆಮಿಷ ಒಡ್ಡಿ ಅವರನ್ನು ಜಾಲದಲ್ಲಿ ಸಿಲುಕಿಸಿ ಆ ಮೇಳೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ವಿಶೇಷವಾಗಿ ಹೆಣ್ಣುಮಕ್ಕಳು ಮೃದು ಮನಸ್ಸಿನವರು ಇರುತ್ತಾರೆ. ಅವರು ಬಹಳ ನಿಷ್ಠೆಯಿಂದ ಇರುತ್ತಾರೆ. ಅವರ ಮಾತುಕತೆಯಲ್ಲಿ ವ್ಯತ್ಯಾಸವಾಗಿದೆ. ಅದನ್ನು ಊರಲ್ಲಿ ಹಿರಿಯರ ಗಮನಕ್ಕೆ ತಂದು ಬಗೆ ಹರಿಸಬಹುದಿತ್ತು. ಅದನ್ನು ಬಿಟ್ಟು ಅಮಾನೀಯವಾಗಿ, ಅಮಾನುಷವಾಗಿ ಹೆಣ್ಣು ಮಗಳನ್ನು ಕೊಲೆ ಮಾಡುವಂಥದ್ದು ಅತ್ಯಂತ ಹೀನ ಕೃತ್ಯ. ಇದನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪೊಲೀಸರು ಮೂರು ದಿನಗಳ ನಂತರ ಶವ ಸಿಕ್ಕಿದೆ ಅಂತ ಹೇಳಿದ್ದಾರೆ ಅವರ ತಾಯಿ ಫೋನ್ ನಂಬರ್ ಕೊಟ್ಟಾಗ ತನಿಖೆ ಚುರುಕುಗೊಳಿಸಿದ್ದಾರೆ. ಇದರಲ್ಲಿ ಪೊಲೀಸರಿಂದ ಲೋಪವಾಗಿದೆ. ಯಾರಾದರೂ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಾಗ ಅದನ್ನು ಸುತ್ತಲಿನ ಪೊಲೀಸ್ ಸ್ಟೇಷನ್‌ಗಳಿಗೆ ಮಾಹಿತಿ ಕೊಡುತ್ತಾರೆ. ಆ ಬಗ್ಗೆ ಮಾಹಿತಿ ನೀಡದೇ ಸ್ವಾತಿಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹೀಗಾಗಿ ಹಲವಾರು ಸಂಶಯಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದರು.

ಇದರಲ್ಲಿ ಮೇಲ್ನೋಟಕ್ಕೆ ಜಿಹಾದ್‌ ಅಂತ ಅನಿಸುತ್ತದೆ. ಇನ್ನೂ ಕೆಲವರು ಭಾಗವಹಿಸಿರುವದನ್ನು ನೋಡಿದಾಗ ಸಂಪೂರ್ಣ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಇದು ಮೇಲ್ನೋಟಕ್ಕೆ ಪ್ರೇಮ ಪ್ರಕರಣ ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ಜಾಡು ಹಿಡಿದು ತನಿಖೆ ಮಾಡಬೇಕು ಅಂದಾಗ ಮಾತ್ರ ಸತ್ಯ ಹೊರ ಬರಲಿದೆ ಎಂದರು.

ಕಾನೂನು ಸುವ್ಯವಸ್ಥೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದು ಸಣ್ಣ ವಿಷಯ. ಕಾನೂನು ಸುವ್ಯವಸ್ಥೆಯೇ ಇಲ್ಲ. ಯಾರಿಗೂ ಕಾನೂನಿನ ಭಯವಿಲ್ಲ. ಪೊಲೀಸರ ಭಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳೇ ಆಗುತ್ತಿರಲಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿಯೂ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ಈ ರೀತಿಯ ಕೃತ್ಯ ಮಾಡುತ್ತಿರುವವರಿಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್‌ ಹಾಜರಿದ್ದರು.

Tags: ಆರೋಪಿಇನ್ಕಾನೂನುಕೆಲಸಗ್ರಾಮೀಣಡಿದಾರಿದಿನದೇಶನಗರಪೊಲೀಸ್ಪ್ರಕರಣಗಳುಬಸವರಾಜಬೆಳೆಬೊಮ್ಮಾಯಿಮಕ್ಕಳಮಹಾಯುವವಿಶೇಷಸಚಿವ

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ರಕ್ಷಣಾ ಚಾಂಪಿಯನ್ ಭಾರತ ಬಾಂಗ್ಲಾದೇಶವನ್ನು 42–21ರಿಂದ ಸೋಲಿಸಿ ಏಷ್ಯನ್ ಗೇಮ್ಸ್‌ನಲ್ಲಿ ಗೆಲುವಿನ ಆರಂಭ

September 22, 2026

ಭಾರತದ ಕಬಡ್ಡಿ ತಂಡಗಳು ಚಿನ್ನದ ಡಬಲ್‌ಗೆ ಸಜ್ಜು; ಐಚಿ-ನಾಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ನಾಳೆಯಿಂದ ಅಭಿಯಾನ ಆರಂಭ

September 20, 2026

ಸೆಪ್ಟೆಂಬರ್ 26ರಿಂದ 30ರವರೆಗೆ ‘ಕರ್ನಾಟಕ ಪರ್ವ-2026’ ಆಯೋಜನೆ: ಸಚಿವ ಯು.ಟಿ. ಖಾದರ್

September 20, 2026

ಕ್ವಾಂಟಂ ಸಮಿಟ್‌ನ್ನು ಜಾಗತಿಕ ವೇದಿಕೆಯಾಗಿಸಲು ಕರ್ನಾಟಕ ಸಜ್ಜು: ಸಚಿವ ಡಾ. ಅಜಯ್ ಧರ್ಮಸಿಂಗ್

September 20, 2026

Recent News

ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಕೇಂದ್ರ ಸಚಿವ ಸೋಮಣ್ಣರಿಂದ ಅಭಿನಂದನೆ

September 19, 2026

ಮೀನುಗಾರರ ಸಮಸ್ಯೆ ಆಲಿಸಿದ ಡಿಕೆಶಿ: ಮಂಗಳೂರು ಬಂದರಿಗೆ ದಿಢೀರ್ ಭೇಟಿ, ಅಕ್ರಮಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

September 19, 2026

ಭಾರತೀಯ ಮಹಿಳಾ ಕಬಡ್ಡಿ ತಂಡ ಜಪಾನ್‌ ತಲುಪಿದೆ; ನಾಲ್ಕನೇ ಸತತ ಚಿನ್ನದ ಗುರಿ

September 19, 2026

ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯೆಂದು ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್

September 18, 2026
https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.