ತುರ್ತು ಚಿಕಿತ್ಸೆಗೆ ಬಂದಾಗ ಪ್ರಾಥಮಿಕ ಚಿಕಿತ್ಸೆ ಕೊಡುವ ಸಂಸ್ಕಾರ ಬರಬೇಕು:ಡಾ.ಸಿ.ಎನ್. ಮಂಜುನಾಥ
ಹುಬ್ಬಳ್ಳಿ: ವೈದ್ಯರಲ್ಲಿ ಮಾನವೀಯತೆ ಮುಖ್ಯವಾಗಿರುತ್ತದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಜಂಟಿಯಾಗಿ ಕೆಲಸ ಮಾಡಬೇಕು. ಯಾವುದೇ ರೋಗಿ ತುರ್ತು ಚಿಕಿತ್ಸೆಗೆ ಬಂದಾಗ ಪ್ರಾಥಮಿಕ ಚಿಕಿತ್ಸೆ ಕೊಡುವ ಸಂಸ್ಕಾರ ಎಲ್ಲ ಆಸ್ಪತ್ರೆಗಳಿಗೂ ಬರಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ ಹೇಳಿದರು.
ಇಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಅಶೋಕ ಆಸ್ಪತ್ರೆಯಲ್ಲಿ ನೂತನ ಕ್ಯಾಥಲ್ಯಾಬ್ ಹಾಗೂ ಡಯಾಲಿಸಿಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಇವತ್ತು ಐವತ್ತು ವರ್ಷಕ್ಕಿಂತ ಚಿಕ್ಕ ಮಹಿಳೆಯರಿಗೆ ಶೇ8 ರಷ್ಟು ಹೃದಯಾಘಾತವಾಗುತ್ತಿದೆ. ಇವತ್ತು ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಂತೆ ಕಲೆಸ ಮಾಡುತ್ತಿರುವುದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ ತಾಯಂದಿರ ಅಭ್ಯಾಸವಾಗುತ್ತದೆ. ಗಂಡಸರನ್ನು ಹೋಲಿಸಿದರೆ ಹೆಣ್ಣು ಮಕ್ಕಳಲ್ಲಿ ಹೃದಯಾಘಾತ ಕಡಿಮೆ ಆದರೆ, ಕಳೆದ ಮೂವತ್ತು ವರ್ಷದಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗುತ್ತಿದೆ.
ತಂದೆ ತಾಯಿಗಳು ಆರೋಗ್ಯವಾಗಿದ್ದರೆ ಅವರು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ. ವಯಸ್ಸು ಬದಲಾಯಿಸಲು ಆಗುವುದಿಲ್ಲ. ಧೂಮ ಪಾನ ಬದಲಾಯಿಸಬಹುದು. ಮದ್ಯಪಾನ ಕೂಡ ಹೃದಯಾಘಾತಕ್ಕೆ ಕಾರಣ. ದಕ್ಷಿಣ ಭಾರತದಲ್ಲಿ ಶೇ 60 ರಷ್ಟು ಮದ್ಯ ಮಾರಾಟವಾಗುತ್ತದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮೊದಲು ಯಾರಾದರೂ ಕುಡಿದು ಬಂದರೆ ಅವರನ್ನು ಊರಲ್ಲಿ ಸೇರಿಸುತ್ತಿರಲಿಲ್ಲ.
ಈಗ ಕುಡಿಯದವನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ. ನಮ್ಮ ಕರ್ನಾಟಕದಲ್ಲಿ 8 ರಿಂದ 9 ಕೆಟ್ ಖರ್ಚಾಗುತ್ತದೆ ಇದು ವಿಷಾದಕರ., ಸಕ್ಕರೆ ಖಾಯಿಲೆ 15 ಕೋಟಿ ಜನರಿಗೆ ಇದೆ. ಸಕ್ಕರೆ ಖಾಯಿಲೆ ಇರುವ ಶೇ 5 ರಷ್ಟು ಜನರಿಗೆ ಹೃದಯಾಘಾತ ಆಗುತ್ತದೆ ಎಂದರು.
ಅವಿಭಕ್ತ ಕುಟುಂಬಗಳು ಒಡೆಯುವುದರಿಂದ ಹೃದಯಾಘಾತ ಹೆಚ್ಚಾಗುತ್ತದೆ. ಸಂಸಾರದಲ್ಲಿ ಒತ್ತಡ ಕೂಡ ಹೊಸ ಧೂಮಪಾನವಾಗಿದೆ. ಶೇ 25 ರಷ್ಟು ಹೃದಯಾಘಾತಕ್ಕೆ ಒತ್ತಡ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಒತ್ತಡ, ಶೀಮಂತರಿಗೆ ಹಣ ಉಳಿಸಿಕೊಳ್ಳುವ ಒತ್ತಡ, ಬಡವರಿಗೆ ದುಡಿಯುವ ಒತ್ತಡ, ಅವಿಭಕ್ತ ಕುಟುಂಬ ಇದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು. ಇವತ್ತು ಗಂಡ ಹೆಂಡತಿ ಒಟ್ಟಿಗೆ ಇರುವುದೇ ಅವಿಭಕ್ತ ಕುಟುಂಬ ಅನ್ನುವಂತಾಗಿದೆ. ಎಂದರು.
ಹೃದ್ರೋಗಿಗಳಿಗೆ ವರದಾನ
ವಾಯು ಮಾಲಿನ್ಯ ಅತ್ಯಂತ ಪ್ರಮುಖ ಕಾರಣ, ಅದರಿಂದ ಹೃದಯಾಘಾತ ಆಗುತ್ತದೆ, ಗರ್ಭಿಣಿಯರಿಗೆ ತೂಕ ಕಡಿಮೆಯಾಗಬಹುದು. ಅಶೋಕ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಕ್ಯಾಥಲ್ಯಾಬ್ ಮಾಡಿರುವುದುರು ಹೃದಯ ರೋಗಿಗಳಿಗೆ ವರದಾನವಾಗಿದೆ. ಹೃದಯದ ರಕ್ತನಾಳ ಬ್ಲಾಕ್ ಆದಾಗ ಅಂತಹ ಸಂದರ್ಭದಲ್ಲಿ ವಿಳಂಬ ಮಾಡದೇ ಚಿಕಿತ್ಸೆ ಕೊಡಬೆಕು. ಪ್ರತಿ ಮೂವತ್ತು ನಿಮಿಷ ವಿಳಂಬವಾದರೆ ಸಾವಿನ ಪಮಾಣ ಹೆಚ್ಚಾಗುತ್ತದೆ. ಹೃದಯಾಘಾತ ಅವ ಮೂರು ಗಂಟೆ ಒಳಗೆ ಕೊಟ್ಟರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ಆಪರೇಷನ್ ಇಲ್ಲದೇ ಶೇ 30 ಹೃದಯಾಘಾತ ತಡೆಯಬಹುದು ಎಂದರು.
ಕೆಲವರಿಗೆ ಹುಟ್ಟಿನಿಂದಲೇ ರಂಧ್ರಗಳು ಬರುತ್ತವೆ. ಪ್ರತಿ ಒಂದು ಸಾವಿರ ಮಕ್ಕಳಲ್ಲಿ ಆರರಿಂದ ಏಳು ಮಕ್ಕಳಿಗೆ ರಂಧ್ರ ಬರುತ್ತವೆ. ಅದನ್ನು ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಮೂಲಕ ಕಡಿಮೆ ಮಾಡಬಹುದು. ಹೃದಯದ ಕವಾಟಗಳನ್ನು ಕೂಡ ಆಪರೇಷನಿಂದ ಜೋಡಿಸಬಹುದು, ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಹಾರ್ಟ್ ಆಫ್ ದಿ ಹಾರ್ಟ್ ಆಸತ್ರೆ, ಕೇಂದ್ರ ಸರ್ಕಾರ ರಾಜ್ಯ ಸಕಾರ ಆಯುಷ್ಮಾನ್ ಯೋಜನೆ ಅಡಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಆಂಜಿಪ್ಲಾಸರ್ ಮಾಡಬಹುದು, ಕೇಂದ್ರ ಸಕಾರದ ಪ್ರಕಾರ ಬಿಪಿಎಲ್ ಕಾರ್ಡ್ ಕರ್ನಾಟಕದಲ್ಲಿ 65 ಲಕ್ಷ ಕುಟುಂಬಗಳು ಇವೆ. ರಾಜ್ಯ ಸರ್ಕಾರದ ಪ್ರಕಾರ 1 ಕೋಟಿ ಬಿಪಿಎಲ್ ಕಾರ್ಡ್ ಇವೆ. ಆಸತ್ರೆಯಲ್ಲಿ ಗಲಾಟೆ ಮಾಡುವವರು ರಿಚ್ ಬಿಪಿಎಲ್ ಕಾರ್ಡ್‌ನವರು ಎಂದು ಹೇಳಿದರು.
ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿದ್ದೇವೆ. ಹೃದಯ ಸಂಬಂಧಿ ಹಾಗೂ ಕಿಡ್ನಿ ಕಾಯಿಲೆಗಳು ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಕರ್ನಾಟಕದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಆಂಜಿಯೋ ಪಾಕ್ಷಿ ಮಾಡುವ ವ್ಯವಸ್ಥೆ ಇಲ್ಲ. ಮೊಮಾಯಿಯುವರು ಸಿಎಂ ಆಗಿದ್ದಾಗ ಹಬ್ ಆಂಡ್ ಸವ್ ಮಾಡೆಲ್, ತಾಲೂಕು ಆಸತ್ರೆಗೆ ಹೃದಯಾಘಾತವಾದ ಪೇಷಂಟ್ ಹೋದರೆ ಒನ್ ಮಿನಿಟ್ ಇಂಜಕ್ಷನ್ ಕೊಟ್ಟರೆ, ನಂತರ ಮೂರು ನಾಲ್ಕು ಗಂಟೆಯ ಒಳಗೆ ಆಂಜಿಯೊ ಪ್ಲಾಸ್ತಿ ಮಾಡಲಾಗುತ್ತದೆ. ಈಗಿನ ಸರ್ಕಾರವೂ ಇದಕ್ಕೆ ಹೆಚ್ಚಿನ ಪೋತ್ಸಾಹ ಕೊಡುತ್ತಿದೆ. ಈ ಸ್ಟೀಮ್ ತಂದ ಮೇಲೆ ಸಾವಿನ ಪ್ರಮಾಣ ಶೇ 25 ರಿಂದ ಶೇ 8 ಕ್ಕೆ ಇಳಿದಿದೆ. ಈ ಸ್ಟೀಮ್ ಇಡೀ ಭಾರತದಲ್ಲಿ ಜಾರಿಗೆ ಬಂದಿದೆ. ಪ್ರತಿ ದಿನ 30 ಲಕ್ಷ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲಿ 35 % 40 ವರ್ಷಕ್ಕಿಂತ ಚಿಕ್ಕವರಿಗೆ ಹೃದಯಾಘಾತವಾಗುತ್ತಿದೆ ಎಂದರು.
ಬೊಮ್ಮಾಯಿ ಕೊಡುಗೆ
ಜಯದೇವ ಆಸ್ಪತ್ರೆ ಬೆಂಗಳೂರಿನಲ್ಲಿದೆ. ನಂತರ ಮೈಸೂರು, ಗುಲಬರ್ಗದಲ್ಲಿ ಮಾಡಿದ್ದೇವು. 2022 ರಲ್ಲಿ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಮಾಡಬೇಕು ಎಂದು ಒತ್ತಡ ಹೇರಿದರು. ಬೆಳಗಾವಿ ವಿಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದು 435 ಹಾಸಿಗೆಯ ಜಯದೇವ ಹೃದ್ರೋಗ ಆಸತ್ರೆ ಕಾಮಗಾರಿ ಪ್ರಗತಿಯಲಿಲದೆ. 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಐದು ಅಂತಸ್ಸಿನ ಕಟ್ಟಡ ಇದಾಗಿದೆ. ಇದರಿಂದ ಬಹಳ ಜನರಿಗೆ ಅನುಕೂಲವಾಗುತ್ತದೆ. ಜಯದೇವ ಹುಬ್ಬಳ್ಳಿಗೆ ಬರಲು ಬಸವರಾಜ ಬೊಮ್ಮಾಯಿ ಕೊಡುಗೆ ಇದೆ ಎಂದರು.
ವೈದ್ಯರಲ್ಲಿ ಮಾನವೀಯತೆ ಮುಖ್ಯವಾಗಿರುತ್ತದೆ. ನಾವು ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ. ಗುಣಮಟ್ಟದ ಚಿಕಿತ್ಸೆ ಕೊಡುವ ಜವಾಬ್ದಾರಿ ವೈದ್ಯರ ಮೇಲೆ ಇದೆ. ವೈದ್ಯರ ಮೇಲೆ ಹಲ್ಲೆ ಮಾಡುವ ಸಂಸ್ಕೃತಿ ಇರಬಾರದು. ನಿರಂತರವಾಗಿ ವೈದ್ಯರು ರೋಗಿಯ ಆರ್ಥಿಕ ಹಿನ್ನೆಲೆ ಅರ್ಥ ಮಾಡಿಕೊಂಡು ಚಿಕಿತ ಕೊಡಬೇಕು. ಚಿಕಿತ್ಸೆ ಖಾಯಿಲೆಗಿಂತ ಅಪಾಯಕಾರಿಯಾಗಬಾರದು. ವೈದ್ಯರು ಆಸತ್ರೆ ಮಾಡಿದರೆ ಮಾನವೀಯತೆ ಇರುತ್ತದೆ. ಬಿಜಿನೆಸ್ ಪೀಪಲ್ಸ್ ಆಸತ ತೆರೆದರೆ ವ್ಯಾಪಾರ ಮಾಡುತ್ತಾರೆ. ವೈದ್ಯರೇ ಆರಂಭಿಸುವ ಆಸ್ಪತ್ರೆಗಳು ಹೆಚ್ಚು ಬರಬೇಕು ಎಂದು ಹೇಳಿದರು.












