ಬೆಂಗಳೂರು: ಆರ್‌ಸಿಬಿ ಗೆಲುವಿನ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಂಡದ ವಿಜಯೋತ್ಸವ ಮೆರವಣಿಗೆಗೆ ಅವಕಾಶ ಕೊಡಬೇಕೆಂದು ಎಕ್ಸ್‌ನಲ್ಲಿ ಒತ್ತಾಯಿಸಿದ್ದರು. ಆದರೆ, ಈಗ ವರಸೆ ಬದಲಾಯಿಸಿದ್ದಾರೆ. ಬಿಜೆಪಿಯ ಯೂ-ಟರ್ನ್ ಪರಿಪಾಠ ಹೊಸತೇನಲ್ಲ” ಎಂದು ಕಾಂಗ್ರೆಸ್‌ನ ನಿಕಟಪೂರ್ವ ಸಂಸದ ಡಿ.ಕೆ.ಸುರೇಶ್ ಟೀಕಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್, ಬಿಜೆಪಿಯವರು ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. “ಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯಿಸಿ, ಕ್ರೀಡಾಭಿಮಾನಿಗಳಿಗೆ ಅವಮಾನ ಮಾಡುತ್ತೀರಿ ಎಂದು ಕೇಳಿದ್ದವರು, ಈಗ ಮೌನವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಇಂತಹ ಪ್ರವೃತ್ತಿ ತೋರಿದ್ದಾರೆ. ಜನರು ಅವರಿಗೆ ಬಹುಮತ ನೀಡಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಂಭವಿಸಿರುವ ದುರಂತಗಳ ಪಟ್ಟಿಯನ್ನು ನಾವು ಕೊಡುತ್ತೇವೆ. ನೈತಿಕತೆ ಇದ್ದರೆ ಬಿಜೆಪಿ ನಾಯಕರು ಮೊದಲು ರಾಜೀನಾಮೆ ಕೊಡಲಿ” ಎಂದು ತಿರುಗೇಟು ನೀಡಿದರು.
ಮುಂಬೈ ದಾಳಿಯ ಸಂದರ್ಭದಲ್ಲಿ ಮನಮೋಹನ್ ಸಿಂಗ್ ರಾಜೀನಾಮೆ ಕೊಡಬೇಕಿತ್ತು ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ, “ಆ ಘಟನೆಯ ಬಳಿಕ ವಿಲಾಸ್‌ರಾವ್ ದೇಶಮುಖ್ ರಾಜೀನಾಮೆ ಕೊಟ್ಟಿದ್ದರು. ಕುಮಾರಸ್ವಾಮಿಯವರಿಗೆ ಇದು ಮರೆತುಹೋಗಿದೆ. ಡಿ.ಕೆ.ಶಿವಕುಮಾರ್‌ರನ್ನು ನೆನಪಿಸಿಕೊಳ್ಳದೆ ಅವರಿಗೆ ಊಟ-ನಿದ್ದೆ ಆಗುವುದಿಲ್ಲ. ಅವರು ಮೊದಲು ತಮ್ಮ ಆರೋಗ್ಯದ ಗಮನವಿಡಲಿ, ಜನರ ಸೇವೆ ಮಾಡಲಿ” ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿಯವರ “ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ” ಎಂಬ ಪ್ರತಿಕ್ರಿಯೆಗೆ, “ಎಲ್ಲರ ಆರೋಗ್ಯವನ್ನು ದೇವರೇ ಕಾಯುತ್ತಾನೆ. ಮಂಡ್ಯ ಜನರ ಆಶೀರ್ವಾದವಿರಬಹುದು, ಆದರೆ ಕರ್ನಾಟಕದ ಜನರ ಹಾರೈಕೆಯಲ್ಲ. ಅವರು ಖುಷಿಯಾಗಿದ್ದರೆ ನಮಗೂ ಸಂತೋಷ” ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ಬಗ್ಗೆ, “ನಮ್ಮ ಪೊಲೀಸರು ಸಮರ್ಥರಿದ್ದಾರೆ. ಬಿಜೆಪಿ ಒತ್ತಾಯದ ಮೇರೆಗೆ ಹಿಂದೆ ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ಹಲವು ಪ್ರಕರಣಗಳನ್ನು ಕೊಟ್ಟಿತ್ತು. ಆದರೆ, ಫಲಿತಾಂಶ ಏನಾಯಿತು? ಕರಾವಳಿಯಲ್ಲಿ ವಿಷಬೀಜ ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಕ್ರಮ ಕೈಗೊಳ್ಳುತ್ತದೆ” ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್‌ರವರ ದೆಹಲಿ ಭೇಟಿಯ ಬಗ್ಗೆ, “ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿ ಪ್ರಸಾರ ಮಾಡುತ್ತಿವೆ. ಬೆಂಗಿನ ಕಸ ವಿಲೇವಾರಿ ಟೆಂಡರ್‌ಗೆ ಸಂಬಂಧಿಸಿದಂತೆ, ಶಿವಕುಮಾರ್‌ರವರು ಬಿಬಿಎಂಪಿ ಅಧಿಕಾರಿಗಳ ತಂಡದೊಂದಿಗೆ ದೆಹಿಯಲ್ಲಿ ಹೊಸ ತಂತ್ರತಿಯ ವೀಕ್ಷಣೆಗೆ ತೆರಳಿದ್ದಾರೆ. ಹೊಸ ರವಿರ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ಭೇಟಿಯ ವಿಚಾರ ಸಾಮಾನ್ಯ. ತಿಂಗಿಗೊಮ್ಮೆ ದೆಹಿಗೆ ಭೇಟಿ ನೀಡುವುದು ಸಹಜ” ಎಂದು ಸ್ಪಷ್ಟೀಕರಿಸಿದರು.
ತುಕೂರನ್ನ ಗ್ರೇಟರ್ ಬೆಂಗಳೂರು ವ್ಯಾಪಗಾಸಗಿರ ಗೃಹಸಚಿವ ಪರಮೇಶ್ವರ್‌ರವರ ಹೇಳಿಕೆಗೆ, “ಅದ ಸರಕಾರದ ತೀರ್ಮಾನ. ಸಿಎಂ ಮತ್ತು ಸಚಿವ ಸಂಪುಗದಲ್ಲಿ ಚರ್ಚಾಸಿ ತೆಗೆದುಕೊಂಡ ತೀರ್ಮಾನವನ್ನು ನಾವು ಸ್ವಾಗತಿಸು” ಎಂದರು.
ನಾಮನಿರ್ದೇಶಿತ ವಿಧಾನಪರಿಷತ್ ಸದಸ್ಯರ ಪಟಿಯನ್ನು ಎಐಸಿಸಿ ತಡೆಗಟದಿದೆ ಎಂಬ ವಿಚಾರಕ್ಕೆ, “ನನಗೆ ಈ ಬಗ್ಗೆ ಮಾಹಿತಿಯಿಲ. ಪಕ್ಷದ ಹಿರಿಯ ಮುಖಂಡರು ಇದನ್ನ ಗಮನಿಸಿಕಾ” ಎಂದು ತಿಳಿಸಿದರು.












