ಬೆಂಗಳೂರು: ಜಾಗತಿಕ ಹುಲಿ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವನ್ಯಜೀವಿ ಪ್ರೇಮಿಗಳಿಗೆ ಶುಭಾಶಯ ಕೋರಿದ್ದಾರೆ. ವಿಶ್ವದ ಹುಲಿ ಸಂಖ್ಯೆಯ ಸುಮಾರು ಶೇ.70ರಷ್ಟು ವ್ಯಾಘ್ರಗಳು ಭಾರತದಲ್ಲಿವೆ ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
ಭಾರತದ ಹುಲಿ ಸಂರಕ್ಷಣಾ ಪ್ರಯತ್ನಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಶತಮಾನಗಳಷ್ಟು ಹಳೆಯ ಸಂಸ್ಕೃತಿಯಿಂದ ಸ್ಫೂರ್ತಿ ಪಡೆದಿವೆ ಮತ್ತು ಜನರ ಸಾಮೂಹಿಕ ಇಚ್ಛಾಶಕ್ತಿಯಿಂದ ಬಲಗೊಂಡಿವೆ ಎಂದು ಪ್ರಧಾನಿ ಹೇಳಿದ್ದಾರೆ. ವಿಜ್ಞಾನ ಆಧಾರಿತ ಸಂರಕ್ಷಣೆ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಹುಲಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅರಣ್ಯ ಸಿಬ್ಬಂದಿ, ವಿಜ್ಞಾನಿಗಳು ಮತ್ತು ಸಂರಕ್ಷಣಾ ತಜ್ಞರ ಪ್ರಯತ್ನಗಳು ಹಾಗೂ ಸಮರ್ಪಣೆಯನ್ನು ಶ್ಲಾಘಿಸಿದ ಪ್ರಧಾನಿ, ಸ್ಥಳೀಯ ಸಮುದಾಯಗಳನ್ನು ಸಬಲಗೊಳಿಸಲು ಮತ್ತು ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಥ್ರೆಡ್‌ನಲ್ಲಿ ಹೀಗೆ ಹೇಳಿದ್ದಾರೆ:
“ಜಾಗತಿಕ ಹುಲಿ ದಿನದಂದು ಎಲ್ಲಾ ವನ್ಯಜೀವಿ ಪ್ರಿಯರಿಗೆ ಶುಭಾಶಯಗಳು. ವಿಶ್ವದ ಹುಲಿ ಸಂಖ್ಯೆಯ ಸುಮಾರು ಶೇ.70ರಷ್ಟು ವ್ಯಾಘ್ರಗಳು ಭಾರತದಲ್ಲಿವೆ ಎಂಬ ಅಂಶದ ಬಗ್ಗೆ ಭಾರತದ ಜನರು ಹೆಮ್ಮೆಪಡುತ್ತಾರೆ. ಭಾರತದ ಹುಲಿ ಸಂರಕ್ಷಣಾ ಪ್ರಯತ್ನಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಶತಮಾನಗಳಷ್ಟು ಹಳೆಯ ಸಂಸ್ಕೃತಿಯಿಂದ ಸ್ಫೂರ್ತಿ ಪಡೆದಿವೆ ಮತ್ತು ನಮ್ಮ ಜನರ ಸಾಮೂಹಿಕ ಇಚ್ಛಾಶಕ್ತಿಯ ಬಲ ಪಡೆದಿದೆ. ಹುಲಿ ಸಂರಕ್ಷಣೆಯನ್ನು ಬಲಪಡಿಸುವ ವಿಜ್ಞಾನ ಆಧಾರಿತ ಸಂರಕ್ಷಣೆ, ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.”
“ಹುಲಿ ಸಂರಕ್ಷಣೆಯಲ್ಲಿ ನಮ್ಮ ಅರಣ್ಯ ಸಿಬ್ಬಂದಿ, ವಿಜ್ಞಾನಿಗಳು ಮತ್ತು ಸಂರಕ್ಷಣಾಕಾರರ ಪ್ರಯತ್ನಗಳು ಹಾಗೂ ಸಮರ್ಪಣೆಯು ಪ್ರಮುಖ ಪಾತ್ರ ವಹಿಸಿದೆ. ಆ ಉತ್ಸಾಹದೊಂದಿಗೆ, ಸ್ಥಳೀಯ ಸಮುದಾಯಗಳ ಸಬಲೀಕರಣಕ್ಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಭಾರತವು ಬದ್ಧವಾಗಿದೆ.”











