ಬೆಂಗಳೂರು, ಸೆಪ್ಟೆಂಬರ್ 29:
ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ವಿಶ್ವ ಹೃದಯ ದಿನ 2026 ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ Apex Multispecialty Clinic ಮತ್ತು Manipal Hospitals ವತಿಯಿಂದ “Healthy Hearts for Brighter Tomorrows” ಎಂಬ ಸಂದೇಶದೊಂದಿಗೆ ಜನರಲ್ಲಿ ಹೃದಯದ ಆರೈಕೆಯ ಕುರಿತು ಜಾಗೃತಿ ಮೂಡಿಸುವ ಮಾಹಿತಿ ಬಿಡುಗಡೆ ಮಾಡಲಾಗಿದೆ.
“Don’t Miss a Beat” ಎಂಬ ಸಂದೇಶದ ಮೂಲಕ ಪ್ರತಿಯೊಂದು ಹೃದಯ ಬಡಿತವೂ ಮಹತ್ವದ್ದಾಗಿದೆ ಎಂಬುದನ್ನು ಒತ್ತಿಹೇಳಲಾಗಿದೆ. ದಿನನಿತ್ಯದ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಹೃದಯದ ಆರೋಗ್ಯದತ್ತ ಗಮನ ಹರಿಸಬಹುದು.
ಪ್ರತಿದಿನ ಕನಿಷ್ಠ 20 ನಿಮಿಷ ಚಟುವಟಿಕೆಯಿಂದ ಇರುವಂತೆ, ದೇಹವನ್ನು ಸಕ್ರಿಯವಾಗಿಟ್ಟುಕೊಳ್ಳುವಂತೆ ಸಲಹೆ ನೀಡಲಾಗಿದೆ. ಜೊತೆಗೆ ಹೃದಯ ಸ್ನೇಹಿ ಆಹಾರವನ್ನು ಆಯ್ಕೆ ಮಾಡುವುದು, ತಂಬಾಕು ಉತ್ಪನ್ನಗಳಿಂದ ದೂರವಿರುವುದು ಮತ್ತು ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸುವುದಕ್ಕೂ ಒತ್ತು ನೀಡಲಾಗಿದೆ.
ಅದೇ ರೀತಿ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಹೃದಯದ ಆರೋಗ್ಯದ ಬಗ್ಗೆ ಅರಿವು ಹೊಂದಲು ಸಹಾಯಕವಾಗಬಹುದು.
ಈ ಅಭಿಯಾನದಲ್ಲಿ Dr. Kumar Kenchappa, MD, DM, FACC, FSCAI, Interventional Cardiologist ಅವರು Manipal Hospital Hebbal ಹಾಗೂ Apex Multispecialty Clinicನೊಂದಿಗೆ ಅಭಿಯಾನ ಆಯೋಜಿಸಿದ್ದು. ಹೃದಯದ ಆರೋಗ್ಯ ಎಂದರೆ ಕೇವಲ ಕಾಯಿಲೆ ಬಂದಾಗ ಗಮನಿಸುವ ವಿಷಯವಲ್ಲ. ಆಹಾರ, ವ್ಯಾಯಾಮ, ಒತ್ತಡ ನಿಯಂತ್ರಣ, ತಂಬಾಕು ಮುಕ್ತ ಜೀವನಶೈಲಿ ಮತ್ತು ಅಗತ್ಯ ಆರೋಗ್ಯ ತಪಾಸಣೆಗಳಂತಹ ಅಭ್ಯಾಸಗಳಿಗೆ ದಿನನಿತ್ಯದಲ್ಲೇ ಆದ್ಯತೆ ನೀಡುವುದು ಮುಖ್ಯ ಎಂಬ ಸಂದೇಶವನ್ನು ಈ ವಿಶ್ವ ಹೃದಯ ದಿನದ ಅಭಿಯಾನ ನೀಡುತ್ತದೆ.
ಮುಖ್ಯ ಸೂಚನೆ
ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮೊದಲು ಅರ್ಹ ವೈದ್ಯಕೀಯ ತಜ್ಞರ ಸಲಹೆ ಪಡೆಯಿರಿ. ತುರ್ತು ಹೃದಯ ಸಂಬಂಧಿತ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯ. ಪೋಸ್ಟರ್‌ನಲ್ಲಿರುವ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅಥವಾ ಬದಲಾಗಿದ್ದರೆ, ಅದರ ನಿಖರತೆಯ ಕುರಿತು ನಾವು ಜವಾಬ್ದಾರರಾಗಿರುವುದಿಲ್ಲ.











