Wednesday, September 30, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News State Politics BJP

ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ ರಾಹುಲ್ ಗಾಂಧಿ: ಛಲವಾದಿ ನಾರಾಯಣಸ್ವಾಮಿ ಆರೋಪ

PREM SHEKHAR PV by PREM SHEKHAR PV
9 hours ago
Reading Time: 1 min read
A A
100
VIEWS

ಮೈಸೂರು: ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಕಾಕ್ರೋಚ್ ಜನತಾ ಪಾರ್ಟಿಯ ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿ ನೆಹರು, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಿಂಬಾಲಕರಲ್ಲ. ರಾಜೀವ್ ಗಾಂಧಿ ಒಬ್ಬ ಯುವಕ ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ. ಇದು ಈ ದೇಶದ ವಿಪರ್ಯಾಸದ ರಾಜಕಾರಣ” ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷವು ಎಸ್‌ಐಆರ್ (ವಿಶೇಷ ತೀವ್ರ ಪರಿಶೀಲನೆ) ವಿರುದ್ಧ ದೊಡ್ಡ ಸಮಸ್ಯೆ ಮಾಡಲು ಹೊರಟಿದೆ ಎಂದು ಅವರು ಟೀಕಿಸಿದರು. “ಎಸ್‌ಐಆರ್ ಬಿಜೆಪಿಗೆ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟ ವಿಷಯವಲ್ಲ. ಇದು ಚುನಾವಣಾ ಆಯೋಗ ಮಾಡುವ ಕೆಲಸ. ಪ್ರತಿ 15-20 ವರ್ಷಕ್ಕೊಮ್ಮೆ ವಿಶೇಷ ಪರಿಶೀಲನೆ ಸಹಜವಾಗಿ ನಡೆಯುತ್ತದೆ. ಬಿಜೆಪಿ ಅವಧಿಯಲ್ಲಿ ಇದು ಪ್ರಥಮ ಬಾರಿಗೆ ನಡೆದಿದೆ. ಹಿಂದೆ ಕಾಂಗ್ರೆಸ್ ಅನೇಕ ಬಾರಿ ಇದನ್ನು ಮಾಡಿದೆ. ಆಗ ಈ ರೀತಿಯ ವಿರೋಧ ಅಥವಾ ವಾದ-ವಿವಾದಗಳು ನಡೆದಿರಲಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯಲ್ಲಿ ಈ ದೇಶಕ್ಕೆ ಸಂಬಂಧಪಡದವರು, ಎರಡು ಕಡೆ ಹೆಸರು ಇರುವವರು ಹಾಗೂ ಮೃತರ ಹೆಸರುಗಳನ್ನು ಎಸ್‌ಐಆರ್ ಅಡಿ ರದ್ದುಪಡಿಸಲಾಗುತ್ತದೆ ಎಂದು ವಿವರಿಸಿದ ಅವರು, “ಬಾಂಗ್ಲಾದೇಶದವರು, ಪಾಕಿಸ್ತಾನದವರು, ಶ್ರೀಲಂಕಾ ವಾಸಿಗಳು ನಿಮ್ಮ ಪಕ್ಷದವರಾಗಿ ಮತದಾರರಾಗಿದ್ದರೆ ಅದನ್ನು ಹಾಗೇ ಬಿಡಬೇಕಾ?” ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಕಳೆದ ಬಾರಿ 136 ಸೀಟು ಗೆದ್ದಾಗ, ತೆಲಂಗಾಣ, ಹಿಮಾಚಲ, ಕೇರಳದಲ್ಲಿ ಚುನಾವಣೆ ನಡೆದಾಗ ಮತಗಳ್ಳತನ ನಡೆದಿದೆಯೇ ಎಂದು ಕೇಳಿದ ಅವರು, ಪಶ್ಚಿಮ ಬಂಗಾಳದಲ್ಲಿ ಒಂದು ಸೀಟು ಗೆಲ್ಲುವ ಪರಿಸ್ಥಿತಿ ಇಲ್ಲದಾಗ ಮಾತ್ರ ಮತಗಳ್ಳತನ ನೆನಪಾಗುತ್ತದೆ ಎಂದು ಆಕ್ಷೇಪಿಸಿದರು. “ಜನರು ಚೋರರಿಗೆ ಮತ ಹಾಕುತ್ತಿಲ್ಲ” ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಆರೋಪವಿಲ್ಲ. ಕಳಂಕರಹಿತ ಆಡಳಿತ, ತೀವ್ರಗತಿಯ ಅಭಿವೃದ್ಧಿ ಇದೆ. ಜನರು ಸಂತುಷ್ಟರಾಗಿದ್ದಾರೆ. ಇದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ. ಆದ್ದರಿಂದಲೇ ರಾಹುಲ್ ಗಾಂಧಿ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು. ಅಜಿತ್ ಧೋವಲ್ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಸಂಸತ್ತಿಗೆ ಮೂರು ಬಾರಿ ಚುನಾವಣೆ ನಡೆದಿದೆ. 180-280 ಸೀಟು ಗೆದ್ದಾಗ ಹಾಗೂ 302 ಸೀಟು ಗೆದ್ದಾಗ ಈಗಿನ ಚುನಾವಣಾ ಕಮಿಷನರ್ ಇರಲಿಲ್ಲ. ಈಗ ಅವರು ಬಂದ ಮೇಲೆ ಸೀಟುಗಳು 242ಕ್ಕೆ ಕಡಿಮೆಯಾಗಿವೆ. ಕಾಂಗ್ರೆಸ್‌ನಲ್ಲಿ ಇರುವ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಬೋಗಸ್ ಮತದಾರರನ್ನು ಓಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಕಾಂಗ್ರೆಸ್‌ನ ಭವಿಷ್ಯ ಶೂನ್ಯವಾಗುತ್ತಿದೆ ಎಂದು ಅವರು ಹೇಳಿದರು.

ಕೇರಳದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು “ಎಸ್‌ಐಆರ್ ಬಂದಿದ್ದರಿಂದ ಬೋಗಸ್ ವೋಟ್‌ಗಳೆಲ್ಲ ಹೋಗಿ ನಾವು ಸುಭದ್ರ ಸರ್ಕಾರ ಮಾಡಲು ಅನುಕೂಲವಾಗಿದೆ” ಎಂದು ಹೇಳಿದ್ದಾರೆ. ಇದು ರಾಹುಲ್ ಗಾಂಧಿಯವರಿಗೆ ಉತ್ತರವಾಗಿದೆ. ಆದ್ದರಿಂದ ಕಾಂಗ್ರೆಸ್‌ನ ಹೋರಾಟದಲ್ಲಿ ಹುರುಳಿಲ್ಲ. ಅವರು ಕೇವಲ ಬಿಜೆಪಿಯನ್ನು ಟಾರ್ಗೆಟ್ ಮಾಡಲು ಚುನಾವಣಾ ಆಯೋಗದ ಹೆಗಲ ಮೇಲೆ ಕೋವಿ ಇಟ್ಟು ನಮ್ಮನ್ನು ಗುರಿ ಮಾಡಿದ್ದಾರೆ ಎಂದು ಛಲವಾದಿ ಟೀಕಿಸಿದರು.

ರಾಜ್ಯದಲ್ಲಿ ಬರಗಾಲ ರೈತರನ್ನು ಕಾಡುತ್ತಿದೆ. ಮೂರು ದಿನಗಳ ವಿಶೇಷ ಸದನ (ನಿಜವಾಗಿ ಮುಂದುವರೆದ ಸದನ) ಕರೆದರೂ ರೈತರಿಗೆ ಉತ್ತಮ ಪ್ಯಾಕೇಜ್ ಸಿಕ್ಕಿಲ್ಲ. “ಗುಡ್ಡ ಅಗೆದು ಇಲಿ ಹಿಡಿದಂತಾಗಿದೆ. ಯಡಿಯೂರಪ್ಪ ಮಾದರಿಯಲ್ಲಿ ಹಣ ನೀಡುವಂತೆ ಕೇಳಿದ್ದೆವು. ಕನಿಷ್ಠ ಪರಿಹಾರ ನೀಡಿದ್ದಾರೆ” ಎಂದು ಅವರು ದೂರಿದರು.

ಈ ಸರ್ಕಾರ ರೈತವಿರೋಧಿ ಎಂದು ಹೇಳಿದ ಅವರು, “ರೈತನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಇದ್ದಾರೆ. ಇಡಿ ಕೇಸ್‌ನಲ್ಲಿ ಬಂಧಿತರಾದ ಅವರು ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆಯಿಂದ ಆದಾಯ ಬಂದಿದೆ ಎಂದು ಹೇಳಿದ್ದರು. ಅದು ಯಾರಿಗೂ ಸಾಧ್ಯವಿಲ್ಲ. ನ್ಯಾಯಮೂರ್ತಿಗಳು ‘ಹೊಲದಲ್ಲಿ ಬೆಳೆ ಬೆಳೆದಿದ್ದೀರಾ ಅಥವಾ ಚಿನ್ನ ಬೆಳೆದಿದ್ದೀರಾ?’ ಎಂದು ಕೇಳಿದ್ದರು. 2500 ರೂಪಾಯಿ ಕೊಡುತ್ತೇನೆ ಎಂದು ಕೈ ತೊಳೆದುಕೊಂಡಿದ್ದಾರೆ. ಇದು ದರಿದ್ರ, ದಿವಾಳಿ ಸರ್ಕಾರ. ಹಣಕಾಸು ಇಲಾಖೆ ನೋಟೀಸ್ ನೀಡಿದೆ” ಎಂದು ಆಕ್ಷೇಪಿಸಿದರು.

ವೀರಶೈವ-ಲಿಂಗಾಯತರು ನನ್ನ ಸೇವೆ ಮಾಡಬೇಕು ಎಂದಿರುವ ಮುಖ್ಯಮಂತ್ರಿಗಳು ತಕ್ಷಣ ಎಲ್ಲ ಸ್ವಾಮೀಜಿಗಳ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು. “ಸ್ವಾಮೀಜಿಗಳು ಯಾರ ಗುಲಾಮರಲ್ಲ. ಅವರು ಯಾವ ಪಕ್ಷದ ಅಥವಾ ಸಮುದಾಯದ ಗುಲಾಮರಲ್ಲ” ಎಂದು ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್‌ರಿಗೆ ಮೂರು ಕಾಸಿನ ಬೆಲೆ ಇಲ್ಲ. ಮಾತು ಎತ್ತಿದರೆ ಆರ್‌ಎಸ್‌ಎಸ್ ಎನ್ನುತ್ತಾರೆ. “ನಿಮ್ಮ ಬಾಯಿ ಚಪಲದಿಂದ ಕಾಂಗ್ರೆಸ್ ಇಡೀ ದೇಶದಲ್ಲಿ ನೆಲಕಚ್ಚಿ ಹೋಗಿದೆ” ಎಂದು ಅವರು ಟೀಕಿಸಿದರು.

ಕರ್ನಾಟಕ ಕಾಂಗ್ರೆಸ್‌ಮುಕ್ತವಾಗುವುದು ಗ್ಯಾರಂಟಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ಎನ್‌ಡಿಎ ಮುಂದೆ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೃಹ ಸಚಿವರು ಇತ್ತೀಚೆಗೆ ಗೃಹ ಬಿಟ್ಟು ಹೊರಗೆ ಬರುತ್ತಿಲ್ಲ. ಮಾತು ಎತ್ತಿದರೆ ಆರ್‌ಎಸ್‌ಎಸ್ ಎನ್ನುತ್ತಾರೆ. ಆರ್‌ಎಸ್‌ಎಸ್ ವಿರುದ್ಧ ಯಾವುದೇ ಕ್ರಿಮಿನಲ್ ಕೇಸುಗಳಿಲ್ಲ. ಈ ಅವಧಿಯಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಅವರು ಟೀಕಿಸಿದರು.

ಕಾರ್ಯಕ್ರಮದಲ್ಲಿ ಎಸ್. ಮಹದೇವಯ್ಯ, ಅನಿಲ್ ಥಾಮಸ್, ಶೈಲೇಂದ್ರ, ರುದ್ರಮೂರ್ತಿ ಅಶೋಕ್, ವಿನಯ್ ಕುಮಾರ್, ಅನಿಲ್ ಕುಮಾರ್, ಕಾರ್ತಿಕ್, ಮರಿಯಪ್ಪ, ಅರ್ಜುನ್, ಪಾರ್ಥ, ಪರಶುರಾಮ್, ಶ್ರೀನಿವಾಸ್, ವಸಂತ್ ಕುಮಾರ್, ಪರಮಾನಂದ ಸೇರಿದವರು ಭಾಗವಹಿಸಿದ್ದರು.

Tags: 15amironews

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ತಪ್ಪು ಮಾಹಿತಿ ನೀಡಿದರೆ FIR: SIR ಪ್ರಕ್ರಿಯೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ಕುರಿತು ಆಯುಕ್ತ ಜಗದೀಶ್.ಜಿ ಎಚ್ಚರಿಕೆ

September 29, 2026

ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ ರಾಹುಲ್ ಗಾಂಧಿ: ಛಲವಾದಿ ನಾರಾಯಣಸ್ವಾಮಿ ಆರೋಪ

September 29, 2026

ಬರ ಪರಿಹಾರ ನೀಡದೆ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ವಿಜಯೇಂದ್ರ

September 29, 2026

ವಿಶ್ವ ಹೃದಯ ದಿನ 2026: ಹೃದಯದ ಆರೋಗ್ಯ ಕಾಪಾಡಲು ದಿನನಿತ್ಯದ ಸಣ್ಣ ಬದಲಾವಣೆಗಳು ಮುಖ್ಯ

September 29, 2026

Recent News

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ವಿವಿಧ ಬೇಡಿಕೆಗಳ ಕುರಿತು ಮನವಿ

September 28, 2026

ಸಿಎಂ ಡಿಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ: ಬರ ಪರಿಹಾರ, ಕಸ್ತೂರಿರಂಗನ್ ವರದಿ ಸೇರಿ 4 ಪ್ರಮುಖ ವಿಚಾರಗಳ ಚರ್ಚೆ

September 28, 2026

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಆಹ್ವಾನ

September 28, 2026

ಎಫ್‌ಕೆಸಿಸಿಐ 2026-27ರ ಅಧಿಕಾರಿಗಳ ಆಯ್ಕೆ: ಟಿ. ಸಾಯಿರಾಮ್ ಪ್ರಸಾದ್ ಅಧ್ಯಕ್ಷರು

September 28, 2026
https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.