Wednesday, September 30, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News

ಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿಸಲು ಕಾಮಗಾರಿ ಚುರುಕುಗೊಳಿಸಿ: ಸಚಿವ ಕೆ.ಜೆ. ಜಾರ್ಜ್

Ranjitha by Ranjitha
2 hours ago
Reading Time: 1 min read
A A
100
VIEWS

ವರ್ಷವಿಡೀ ನೀರು ಹರಿಸುವ ಯೋಜನೆಯ ತಾಂತ್ರಿಕ ಅಧ್ಯಯನಕ್ಕೆ ನಿರ್ದೇಶನ; ಮುಖ್ಯಮಂತ್ರಿಗಳೊಂದಿಗೆ ಶೀಘ್ರ ಸಭೆ

ಬೆಂಗಳೂರು: ವಿಶ್ವವಿಖ್ಯಾತ ಜೋಗ ಜಲಪಾತವನ್ನು ಮಳೆಗಾಲಕ್ಕೆ ಮಾತ್ರ ಸೀಮಿತವಾಗದಂತೆ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸರ್ವಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ಇಂಧನ ಭವನದ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಜೋಗ ಜಲಪಾತ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು ಹಾಗೂ ವರ್ಷವಿಡೀ ನಿಗದಿತ ಅವಧಿಯಲ್ಲಿ ಜಲಪಾತಕ್ಕೆ ನೀರು ಹರಿಸುವ ಯೋಜನೆಯ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಪರಿಶೀಲನೆ ಮತ್ತು ವಿವಿಧ ಇಲಾಖೆಗಳ ಅನುಮೋದನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಸೂಚಿಸಿದರು.

ಜಲಪಾತದ ಮೇಲ್ಭಾಗಕ್ಕೆ ನೀರನ್ನು ಪಂಪ್ ಮಾಡಿ ವರ್ಷವಿಡೀ ದೃಶ್ಯ ವೈಭವವನ್ನು ಪ್ರವಾಸಿಗರಿಗೆ ಒದಗಿಸುವ ಪ್ರಸ್ತಾವನೆಯ ಕುರಿತು ಚರ್ಚಿಸಿದ ಸಚಿವರು, ಅಗತ್ಯ ನೀರಿನ ಪ್ರಮಾಣ, ಪಂಪಿಂಗ್ ಸಾಮರ್ಥ್ಯ, ವಿದ್ಯುತ್ ಬಳಕೆ ಮತ್ತು ನಿರ್ವಹಣಾ ವೆಚ್ಚವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತಾಂತ್ರಿಕ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಟ್ಟದ ಅನುಮೋದನೆಗಳನ್ನು ತ್ವರಿತವಾಗಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ರಾತ್ರಿ ವೇಳೆಯ ವಿದ್ಯುತ್ ಲಭ್ಯತೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸೌರಶಕ್ತಿ ಅಥವಾ ಪಂಪ್ಡ್ ಸ್ಟೋರೇಜ್ ಮಾದರಿಯಂತಹ ಪರ್ಯಾಯ ವ್ಯವಸ್ಥೆಗಳ ಕಾರ್ಯಸಾಧ್ಯತೆ ಮತ್ತು ಆರ್ಥಿಕ ಪರಿಣಾಮಗಳನ್ನು ಪರಿಶೀಲಿಸುವಂತೆ ಸೂಚಿಸಿದರು.

“ಜೋಗ ಜಲಪಾತವು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆ. ಅದರ ಸಾಮರ್ಥ್ಯವನ್ನು ಮಳೆಗಾಲಕ್ಕೆ ಮಾತ್ರ ಸೀಮಿತಗೊಳಿಸದೆ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ತಾಣವನ್ನಾಗಿ ರೂಪಿಸುವುದು ನಮ್ಮ ಉದ್ದೇಶ. ನಿಗದಿತ ಅವಧಿಯಲ್ಲಿ ನೀರು ಹರಿಸುವ ಪ್ರಸ್ತಾವನೆಯನ್ನು ತಾಂತ್ರಿಕ ಕಾರ್ಯಸಾಧ್ಯತೆ, ವಿದ್ಯುತ್ ವೆಚ್ಚ ಮತ್ತು ಸುರಕ್ಷತೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಸಬೇಕು. ಅಗತ್ಯ ಅನುಮೋದನೆಗಳಲ್ಲಿ ಅನಗತ್ಯ ವಿಳಂಬವಾಗಬಾರದು. ಸದ್ಯದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ

ಪ್ರವಾಸಿಗರಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿಗದಿತ ಅವಧಿಯಲ್ಲಿ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸಚಿವರು ಸೂಚಿಸಿದರು. ಸಂಜೆ 5 ಅಥವಾ 6 ಗಂಟೆಯ ನಂತರದ ಪ್ರವೇಶ ಮತ್ತು ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.

ಪುರಾತತ್ವ ಇಲಾಖೆ ಸೇರಿದಂತೆ ಸಂಬಂಧಿತ ಸಂಸ್ಥೆಗಳಿಂದ ಅಗತ್ಯ ನಿರಾಕ್ಷೇಪಣಾ ಪತ್ರಗಳು ಮತ್ತು ಅನುಮೋದನೆಗಳನ್ನು ಪಡೆದು, ಜೋಗ್ ಮ್ಯಾನೇಜ್‌ಮೆಂಟ್ ಅಥಾರಿಟಿ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್‌ಆರ್) ಅಧಿಕಾರಿಗಳ ಸಮನ್ವಯದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ರಾಮ್ ಪ್ರಸಾದ್ ಮನೋಹರ್ ಮಾತನಾಡಿ, “ಜೋಗ ಜಲಪಾತವನ್ನು ವರ್ಷವಿಡೀ ಪ್ರವಾಸಿ ತಾಣವನ್ನಾಗಿ ರೂಪಿಸಲು ಅಭಿವೃದ್ಧಿ ಕಾಮಗಾರಿಗಳು, ನೀರು ಹರಿಸುವ ವ್ಯವಸ್ಥೆ ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಸಮಗ್ರವಾಗಿ ಪರಿಗಣಿಸಬೇಕು. ಯೋಜನೆಯ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಆಧರಿಸಿ ಕೆಪಿಸಿಎಲ್, ಜೋಗ್ ಮ್ಯಾನೇಜ್‌ಮೆಂಟ್ ಅಥಾರಿಟಿ, ಜೆಎಲ್‌ಆರ್ ಮತ್ತು ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗುವುದು. ಅಗತ್ಯ ಅನುಮೋದನೆಗಳನ್ನು ಪಡೆದು ಪ್ರವಾಸಿಗರಿಗೆ ಉತ್ತಮ ಮತ್ತು ಸುರಕ್ಷಿತ ಅನುಭವ ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು,” ಎಂದು ತಿಳಿಸಿದರು.

ಸಭೆಯಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್. ಸೇರಿದಂತೆ ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags: amironews

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿಸಲು ಕಾಮಗಾರಿ ಚುರುಕುಗೊಳಿಸಿ: ಸಚಿವ ಕೆ.ಜೆ. ಜಾರ್ಜ್

September 30, 2026

ನೀರು ಧಂದಾ ಐತಿಹಾಸಿಕ ಟ್ರಿಬಲ್ ಪೂರ್ಣಗೊಳಿಸಿ ಭಾರತಕ್ಕೆ ಮಿಶ್ರ ಟ್ರಾಪ್ ತಂಡ ಸುವರ್ಣ

September 30, 2026

ತಪ್ಪು ಮಾಹಿತಿ ನೀಡಿದರೆ FIR: SIR ಪ್ರಕ್ರಿಯೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ಕುರಿತು ಆಯುಕ್ತ ಜಗದೀಶ್.ಜಿ ಎಚ್ಚರಿಕೆ

September 29, 2026

ಅಭಿಜಿತ್ ದೀಪ್ಕೆಯ ಹಿಂಬಾಲಕರಾಗಿದ್ದಾರೆ ರಾಹುಲ್ ಗಾಂಧಿ: ಛಲವಾದಿ ನಾರಾಯಣಸ್ವಾಮಿ ಆರೋಪ

September 29, 2026

Recent News

ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಏಕೆ ಸುಲಭವಾಗಿ ಹೊರಹಾಕಲಾಗುವುದಿಲ್ಲ!!?

September 28, 2026

ಟಾಟಾ ಡಬ್ಲ್ಯುಪಿಎಲ್ 2027: 13 ಆಟಗಾರರನ್ನು ಉಳಿಸಿಕೊಂಡ ಆರ್‌ಸಿಬಿ; ಎಲ್ಲಿ ಪೆರ್ರಿ ತಂಡಕ್ಕೆ ಮರಳಿ ಸೇರ್ಪಡೆ

September 28, 2026

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್: ಕರ್ನಾಟಕದ ವಿವಿಧ ಬೇಡಿಕೆಗಳ ಕುರಿತು ಮನವಿ

September 28, 2026

ಸಿಎಂ ಡಿಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ: ಬರ ಪರಿಹಾರ, ಕಸ್ತೂರಿರಂಗನ್ ವರದಿ ಸೇರಿ 4 ಪ್ರಮುಖ ವಿಚಾರಗಳ ಚರ್ಚೆ

September 28, 2026
https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.