Saturday, October 3, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home app amiro news

ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ‘ಬೆಂಗಳೂರು ಜಾತ್ರೆ’: ಸಚಿವ ಕೃಷ್ಣ ಬೈರೇಗೌಡ

PREM SHEKHAR PV by PREM SHEKHAR PV
4 hours ago
Reading Time: 1 min read
A A
100
VIEWS

ಬೆಂಗಳೂರು: ನಗರದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ಕಾಲ ‘ಬೆಂಗಳೂರು ಜಾತ್ರೆ’ ಆಯೋಜಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದರು.

ಜಿಬಿಎ ಕೇಂದ್ರ ಕಛೇರಿ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಬೆಂಗಳೂರಿನಲ್ಲಿ ಪ್ರತಿದಿನವೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ ಕೇವಲ ಮೂಲಭೂತ ಸೌಕರ್ಯಗಳಷ್ಟೇ ಜೀವನವಲ್ಲ. ನಾಗರಿಕರ ಜೀವನದ ಗುಣಮಟ್ಟ ಉತ್ತಮವಾಗಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ನಮ್ಮ ಪರಂಪರೆಯ ಆಸ್ವಾದನೆಯೂ ಅಷ್ಟೇ ಮುಖ್ಯ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ‘ಬೆಂಗಳೂರು ಜಾತ್ರೆ’ ಆಯೋಜಿಸುತ್ತಿದೆ” ಎಂದು ಹೇಳಿದರು.

ಆಗಸ್ಟ್ 15ರಂದು ಆಯೋಜಿಸಲಾಗಿದ್ದ ‘ಫ್ರೀಡಂ ಹಬ್ಬ’ ಜನರಿಂದ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಅದರ ಯಶಸ್ಸನ್ನು ಗಮನಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಿಸೆಂಬರ್‌ನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ ಈಗ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಈ ಬೃಹತ್ ಕಾರ್ಯಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಬಿಎಂಆರ್‌ಸಿಎಲ್ (ಮೆಟ್ರೋ), ಪೊಲೀಸ್, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಡಿಎ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಒಂದಾಗಿ ಕಾರ್ಯಕ್ರಮವನ್ನು ಸಂಘಟಿಸಲಿವೆ.

ನಾಗರಿಕರ ಹಬ್ಬವಾಗಲಿದೆ

‘ಬೆಂಗಳೂರು ಜಾತ್ರೆ’ ಕೇವಲ ಸರ್ಕಾರದ ಅಧಿಕೃತ ಕಾರ್ಯಕ್ರಮವಲ್ಲ. ಇದು ಸಂಪೂರ್ಣವಾಗಿ ನಾಗರಿಕರ ಹಬ್ಬವಾಗಲಿದೆ. ಐಟಿ-ಬಿಟಿ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಲಾ ಗ್ಯಾಲರಿಗಳು, ಸಾರ್ವಜನಿಕ ಉದ್ದಿಮೆಗಳು ಹಾಗೂ ಹೋಟೆಲ್ ಅಸೋಸಿಯೇಷನ್‌ಗಳಿಗೆ ಪತ್ರ ಬರೆಯಲಾಗುತ್ತಿದ್ದು, ಅವರು ತಮ್ಮ ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಮನವಿ ಮಾಡಲಾಗುತ್ತಿದೆ.

ಹೋಟೆಲ್ ಅಸೋಸಿಯೇಷನ್ ಸಹಯೋಗದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ವೈವಿಧ್ಯಗಳನ್ನು ಪರಿಚಯಿಸುವ ಫುಡ್ ಫೆಸ್ಟಿವಲ್‌ಗಳು ನಡೆಯಲಿವೆ. ಹಳೆಯ ಪೆಟೆ ಹಾಗೂ ಪರಂಪರೆ ಪ್ರದೇಶಗಳಲ್ಲಿ ಸ್ಥಳೀಯ ‘ಊರ ಹಬ್ಬ’ಗಳನ್ನು ಆಯೋಜಿಸಲು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಹಯೋಗದಲ್ಲಿ ರಸ್ತೆ, ಉದ್ಯಾನ, ಆಟದ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ಕಲಾ ಪ್ರದರ್ಶನ, ಮಕ್ಕಳ ಚಟುವಟಿಕೆ ಮತ್ತು ಬೀದಿ ಉತ್ಸವಗಳನ್ನು ನಡೆಸಲಾಗುವುದು.

ಮೆಟ್ರೋ ನಿಲ್ದಾಣಗಳಲ್ಲಿ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು, ಬಿಎಂಟಿಸಿ ಬಸ್‌ಗಳಲ್ಲಿ ಜಾತ್ರೆಯ ಬ್ರ್ಯಾಂಡಿಂಗ್, ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮಗಳು, ಐಐಎಸ್‌ಸಿ, ಐಐಎಂ, ಎನ್‌ಜಿಎಂಎ, ಚಿತ್ರಕಲಾ ಪರಿಷತ್, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ಪ್ಲಾನೆಟೇರಿಯಂ ಸೇರಿದಂತೆ ಹಲವು ಸಂಸ್ಥೆಗಳು ಭಾಗಿಯಾಗಲಿವೆ. ರಂಗಶಂಕರ, ಜಾಗೃತಿ, ಬಿಐಸಿ, ಎಂಎಪಿ, ಐಎಂಇ, ಸಭಾ, ಅಟ್ಟಗಲಾಟಾ ಮುಂತಾದ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ಜಾತ್ರೆಯ ಕ್ಯಾಲೆಂಡರ್‌ನಡಿ ನಡೆಸಬಹುದು.

ಆರ್‌ಡಬ್ಲ್ಯೂಎಗಳು, ಎನ್‌ಜಿಓಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸಿಎಸ್‌ಆರ್ ಸಂಸ್ಥೆಗಳಿಗೂ ಆಹ್ವಾನವಿದೆ. ಭಾರತದ ವಿವಿಧ ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳನ್ನು ಆಹ್ವಾನಿಸಲು ರಾಜ್ಯ ಸರ್ಕಾರಗಳಿಗೆ ಮನವಿ ಕಳುಹಿಸಲಾಗುವುದು.

300ಕ್ಕೂ ಹೆಚ್ಚು ಕಾರ್ಯಕ್ರಮಗಳು; ಪ್ರವೇಶ ಶುಲ್ಕ ಇಲ್ಲ

10 ದಿನಗಳಲ್ಲಿ 300ಕ್ಕೂ ಹೆಚ್ಚು ಕಲೆ, ಸಾಹಿತ್ಯ, ಸಂಗೀತ, ನಾಟಕ, ಪರಿಸರ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವ ಗುರಿ ಹೊಂದಲಾಗಿದೆ. ಸರ್ಕಾರ ಆಯೋಜಿಸುವ ಯಾವುದೇ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ವಿಶೇಷ ವೆಬ್‌ಸೈಟ್ ಮೂಲಕ ಎಲ್ಲ ಕಾರ್ಯಕ್ರಮಗಳ ಮಾಹಿತಿ ಮುಂಚಿತವಾಗಿ ಪ್ರಕಟಿಸಲಾಗುವುದು. ಬೃಹತ್ ಕಾರ್ಯಕ್ರಮಗಳಿಗೆ ಮಾತ್ರ ಮುಂಗಡ ನೋಂದಣಿ ವ್ಯವಸ್ಥೆ ಇರುತ್ತದೆ.

ಡಿಸೆಂಬರ್ 13ರಂದು ನಗರದ ಮಧ್ಯಭಾಗದಲ್ಲಿ ವಿಜೃಂಭಣೆಯ ಬೃಹತ್ ಸಮಾರೋಪ ಕಾರ್ಯಕ್ರಮ ಆಯೋಜಿಸಲಾಗುವುದು.

ಅಂದಾಜು ವೆಚ್ಚ 15–20 ಕೋಟಿ

ಕಾರ್ಯಕ್ರಮಕ್ಕೆ ಅಂದಾಜು 15ರಿಂದ 20 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5 ಕೋಟಿ ರೂ. ಹಾಗೂ ಐದು ನಗರ ಪಾಲಿಕೆಗಳಿಂದ ತಲಾ 1 ಕೋಟಿ ರೂ. ಒದಗಿಸಲಾಗುವುದು. ಉಳಿದ ಅನುದಾನವನ್ನು ಮೆಟ್ರೋ, ಬೆಸ್ಕಾಂ, ಜಲಮಂಡಳಿ ಹಾಗೂ ಬಿಡಿಎ ಹಂಚಿಕೊಳ್ಳಲಿವೆ.

ಸಂಚಾರ ಹಾಗೂ ಭದ್ರತೆಗೆ ವಿಶೇಷ ಗಮನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags: 15amironews

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ಅರಸೀಕೆರೆಯಲ್ಲೇ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿ: ಕೆ.ಎಂ. ಶಿವಲಿಂಗೇಗೌಡ

October 3, 2026

ಹೆಚ್ಚಿನ ಹೂಡಿಕೆ-ತಂತ್ರಜ್ಞಾನ ಸಹಕಾರಕ್ಕೆ ಅವಕಾಶ: ಕೊರಿಯಾ ನಿಯೋಗದೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಭೆ

October 3, 2026

ಆನಂದರಾವ್ ವೃತ್ತ ಬಳಿ ₹41.50 ಕೋಟಿ ವೆಚ್ಚದ 128 ಪೊಲೀಸ್ ಕಾನ್‌ಸ್ಟೇಬಲ್ ವಸತಿಗೃಹಗಳ ಸಮುಚ್ಛಯ ಉದ್ಘಾಟನೆ: ಪ್ರಿಯಾಂಕ್ ಖರ್ಗೆ

October 3, 2026

ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ‘ಬೆಂಗಳೂರು ಜಾತ್ರೆ’: ಸಚಿವ ಕೃಷ್ಣ ಬೈರೇಗೌಡ

October 3, 2026

Recent News

ಭಾರತ ಮಹಿಳಾ ಹಾಕಿ ತಂಡಕ್ಕೆ ಕೆಒಎ ಅಧ್ಯಕ್ಷರಾದ ಡಾ.ಕೆ.ಗೋವಿಂದರಾಜ್ ಅಭಿನಂದನೆ

October 2, 2026

ಮೈಸೂರು ದಸರಾ ಚಿತ್ರಸಂತೆ ಉದ್ಘಾಟನೆ: ಕಲೆಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಬದ್ಧತೆ – ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

October 2, 2026

ಕಾವೇರಿ ನೀರು ಹರಿವು 2,000 ಕ್ಯೂಸೆಕ್ಸ್‌ಗೆ ಇಳಿಸಲು CWMAಗೆ ಕರ್ನಾಟಕ ಮನವಿ: ಸಚಿವ ಚಲುವರಾಯಸ್ವಾಮಿ

October 2, 2026

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅಬು ಧಾಬಿಗೆ ಸ್ಥಳಾಂತರ; ಪ್ರಧಾನಿ ಮೋದಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಭಾವುಕರಾದ ಹೀರೋ ಪೈಲಟ್

October 2, 2026
https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.