Thursday, October 8, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home Special

ಬಿಡಿಎ ಅಧ್ಯಕ್ಷರ ಕುರ್ಚಿಯಲ್ಲಿ ಅಂಧ ಬಾಲಕ: 65 ದೃಷ್ಟಿಹೀನ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ ವಿಶೇಷ ಭೇಟಿ

Ranjitha by Ranjitha
17 hours ago
Reading Time: 1 min read
A A
100
VIEWS

ಬೆಂಗಳೂರು: ಸರ್ಕಾರಿ ಕಚೇರಿಯ ವಾತಾವರಣದಲ್ಲಿ ಕಡತ ವಿಲೇವಾರಿ ಹಾಗೂ ಆಡಳಿತಾತ್ಮಕ ಚಟುವಟಿಕೆಗಳ ನಡುವೆ ಅಪರೂಪದ ಮಾನವೀಯ ಕ್ಷಣವೊಂದು ಬೆಂಗಳೂರಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಯಲ್ಲಿ ನಡೆಯಿತು. ‘ಜ್ಯೋತಿ ಸೇವಾ ಸ್ಕೂಲ್ ಫಾರ್ ಬ್ಲೈಂಡ್’ ಶಾಲೆಯ 65 ದೃಷ್ಟಿಹೀನ ಮಕ್ಕಳನ್ನು ಬಿಡಿಎ ಕಚೇರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಭವಿಷ್ಯದ ಕನಸುಗಳನ್ನು ಬೆಳೆಸುವ ಪ್ರಯತ್ನ ನಡೆಯಿತು.

ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ರಾಹುಲ್ ಎಂಬ ದೃಷ್ಟಿಹೀನ ಬಾಲಕನನ್ನು ತಮ್ಮ ಅಧಿಕೃತ ಕುರ್ಚಿಯಲ್ಲಿ ಕೂರಿಸಿ, ಸಾಂಕೇತಿಕವಾಗಿ ಒಂದು ದಿನದ ‘ಬಿಡಿಎ ಅಧ್ಯಕ್ಷ’ನನ್ನಾಗಿ ಮಾಡಿದರು. ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತ ಬಾಲಕನ ಮುಖದಲ್ಲಿ ಮೂಡಿದ ಮುಗ್ಧ ನಗು ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆಯಿತು.

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಎನ್.ಎ. ಹ್ಯಾರಿಸ್, “ಯಾರೂ ಧೃತಿಗೆಡಬೇಡಿ. ನೀವೂ ಸಮಾಜದ ಪ್ರತಿಯೊಬ್ಬರಂತೆ ಸಮಾನರು. ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರವಿದೆ. ದೃಢಸಂಕಲ್ಪದಿಂದ ಓದಿ ಉನ್ನತ ಸ್ಥಾನಗಳನ್ನು ಅಲಂಕರಿಸಿ” ಎಂದು ಪ್ರೋತ್ಸಾಹಿಸಿದರು.

ಬಿಡಿಎ ಆಯುಕ್ತ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸುವುದು ಮತ್ತು ಅವರಲ್ಲಿ ಭವಿಷ್ಯದ ಕನಸುಗಳನ್ನು ಚಿಗುರಿಸುವುದೇ ಈ ಭೇಟಿಯ ಉದ್ದೇಶವಾಗಿದೆ ಎಂದು ಹೇಳಿದರು. ಕೇವಲ ಒಂದು ಭೇಟಿಗೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕೆ ಬಿಡಿಎ ವತಿಯಿಂದ ಅಗತ್ಯ ಬೆಂಬಲ ನೀಡುವ ಭರವಸೆಯನ್ನೂ ನೀಡಿದರು.

ಸರ್ಕಾರಿ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಅನುಭವವನ್ನು ಮಕ್ಕಳು ಹಂಚಿಕೊಂಡರು. “ನಾವು ಎಂದೂ ಸರ್ಕಾರಿ ಕಚೇರಿಗಳನ್ನು ನೋಡಿರಲಿಲ್ಲ. ಆಡಳಿತ ಹೇಗೆ ನಡೆಯುತ್ತದೆ ಎಂಬುದರ ಕಲ್ಪನೆಯೂ ಇರಲಿಲ್ಲ. ಇಂದು ನಮಗೂ ದೊಡ್ಡ ಅಧಿಕಾರಿಗಳಾಗಬೇಕು, ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಆತ್ಮವಿಶ್ವಾಸ ಬಂದಿದೆ” ಎಂದು ಮಕ್ಕಳು ಸಂತಸ ವ್ಯಕ್ತಪಡಿಸಿದರು.

ಬಿಡಿಎ ಅಧಿಕಾರಿಗಳು ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಸಂವಾದ ನಡೆಸಿ ಪ್ರೋತ್ಸಾಹಿಸಿದರು. ಈ ವಿಶೇಷ ಭೇಟಿ ಮಕ್ಕಳಿಗೆ ಸರ್ಕಾರಿ ಆಡಳಿತ ವ್ಯವಸ್ಥೆಯನ್ನು ಪರಿಚಯಿಸುವುದರ ಜೊತೆಗೆ, ತಮ್ಮ ದೃಷ್ಟಿಗೆ ಮೀರಿದ ದೊಡ್ಡ ಕನಸುಗಳನ್ನು ಕಾಣುವ ಆತ್ಮವಿಶ್ವಾಸವನ್ನೂ ತುಂಬಿತು.

ದೃಷ್ಟಿಯ ಕೊರತೆಯಿದ್ದರೂ ಬದುಕಿನ ಗುರಿ ಮತ್ತು ಸಾಧನೆಯ ಕನಸುಗಳಿಗೆ ಮಿತಿ ಇಲ್ಲ ಎಂಬ ಸಂದೇಶವನ್ನು ಸಾರಿದ ಈ ಕಾರ್ಯಕ್ರಮ ಬಿಡಿಎ ಕಚೇರಿಯಲ್ಲಿ ಸಮಾನತೆ, ಪ್ರೋತ್ಸಾಹ ಮತ್ತು ಭರವಸೆಯ ವಾತಾವರಣ ಮೂಡಿಸಿತು.

Tags: amironews

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ನೂತನ ಜವಳಿ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ; ಫಲಾನುಭವಿಗಳಿಗೆ ಪ್ರೋತ್ಸಾಹ ತಲುಪಿಸಿ: ಕಾರ್ಯದರ್ಶಿ ರೋಹಿಣಿ ಸಿಂಧೂರಿ

October 7, 2026

ಗ್ರಾಮಗಳಲ್ಲೇ ಉದ್ಯೋಗ ನೀಡುತ್ತೇವೆ; ವಲಸೆ ಹೋಗಬೇಡಿ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭರವಸೆ

October 7, 2026

ಭೀಕರ ಬರ; ರೈತರಿಗೆ ಅಗತ್ಯ ನೆರವು ಕಲ್ಪಿಸುವುದೇ ಸರ್ಕಾರದ ಮೊದಲ ಆದ್ಯತೆ: ಡಿಸಿಎಂ ಜಿ. ಪರಮೇಶ್ವರ

October 7, 2026

ಅಂತ್ಯೋದಯ ಸಿದ್ಧಾಂತದೊಂದಿಗೆ ಸಮರ್ಥ ನಾಯಕತ್ವ ನೀಡಿದ ಮೋದಿಜೀ: ಯಡಿಯೂರಪ್ಪ

October 7, 2026

Recent News

ಏಷ್ಯನ್‌ ಗೇಮ್ಸ್‌ ಪದಕ ವಿಜೇತರನ್ನು ಅಭಿನಂದಿಸಿ ಶುಭಹಾರೈಸಿದ ಸಿಎಂ, ಡಿಸಿಎಂ

October 6, 2026

ಸೌರವ್ ಗಂಗೂಲಿ ದೆಹಲಿ ಕ್ಯಾಪಿಟಲ್ಸ್‌ನ ಹೊಸ ಹೆಡ್ ಕೋಚ್

October 6, 2026

ಬರಗಾಲದಲ್ಲಿ ಜನರ ಮೇಲೆ ಬರೆ: ಕಂದಾಯ ಶುಲ್ಕ ಏರಿಕೆಗೆ ಆರ್. ಅಶೋಕ್‌ ಟೀಕೆ

October 5, 2026

ಬೆಂಗಳೂರು ‘ಮಾದಕ ನಗರ’ವಾಗುತ್ತಿದೆ: ಆರ್. ಅಶೋಕ್ ಆರೋಪ

October 5, 2026
https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.