ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ವಿವಿಧ ಗ್ರಾಮಗಳ ಪುನರ್ವಸತಿ ಕೇಂದ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಟ್ಟಿ ಚಿನ್ನದ ಗಣಿ ಕಂಪನಿ ಸಂಸ್ಥೆಯ ಅಧ್ಯಕ್ಷರು ಹಾಗೂ ಬೀಳಗಿ ಶಾಸಕ ಜೆ ಟಿ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಬೀಳಗಿ ತಾಲೂಕಿನ ಯಳ್ಳಿಗುತ್ತಿ, ಹೆರಕಲ್, ಕಂದಗಲ ಮತ್ತು ರೊಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ, ಕೆ ಬಿ ಜೆ ಎನ್ ಎಲ್ ವಿಶೇಷ ಅನುದಾನದ ಅಡಿಯಲ್ಲಿ, ಗ್ರಾಮದ ಮುಖ್ಯ ರಸ್ತೆ ಹಗಲಿಕರಣ ಹಾಗೂ ಡಾಂಬರೀಕರಣ, ಶಾಲಾ ಆವರಣದಲ್ಲಿ ಶೌಚಾಲಯ, ಸ್ಮಶಾನದಲ್ಲಿ ತಂಗುದಾಣ, ಚಿತಾಗಾರ ಕಟ್ಟಡ ನಿರ್ಮಾಣ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಗಯ್ಯ ಹಿರೇಮಠ, ತಿಮ್ಮಣ್ಣಗೌಡ ಪಾಟೀಲ್. ಶ್ರೀಶೈಲ ಸೂಳಿಕೇರಿ, ಸಿದ್ದು ಸಾರಾವರಿ, ಮಾಜಿ ಜಿ ಪಂ ಅಧ್ಯಕ್ಷ ಯಮನಪ್ಪ ರೊಳ್ಳಿ ಹಾಗೂ ಸ್ಥಳೀಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.












