Sunday, September 6, 2026
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home app amiro news

ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ವಿಳಂಬ, ಡೆಬ್ರಿ ನಿರ್ವಹಣೆ ಅಸಮರ್ಪಕತೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ

PREM SHEKHAR PV by PREM SHEKHAR PV
5 months ago
Reading Time: 2 mins read
A A
18
SHARES
50
VIEWS

ಕಲಬುರಗಿ: ಆಶ್ರಯ ಯೋಜನೆಯಡಿ ಪಲ್ಲಾಪುರ ಜಫರಾಬಾದ್ ಬಡಾವಣೆಯಲ್ಲಿ 695 ಮನೆಗಳ ನಿರ್ಮಾಣದಲ್ಲಿ ವಿಳಂಬವಾಗಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಚಿವರು ಈ ವಿಚಾರವನ್ನು ತೀವ್ರವಾಗಿ ಎತ್ತಿಹಿಡಿದರು.

2023-24 ಹಾಗೂ 2005-06ನೇ ಸಾಲಿನ ಆಶ್ರಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ 695 ನಿವೇಶನಗಳಲ್ಲಿ 652 ಮನೆಗಳ ನಿರ್ಮಾಣಕ್ಕೆ ರಾಯಚೂರಿನ ಕ್ಯಾಶೋಟೆಕ್ ನಿರ್ಮಾಣ ಕೇಂದ್ರಕ್ಕೆ ಕಾರ್ಯಾದೇಶ ನೀಡಲಾಗಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ ಕೆಕೆಆರ್‌ಡಿಬಿ ಮೂಲಕ 13 ಕೋಟಿ ರೂಪಾಯಿ ಅನುದಾನ ಸ್ಲಂ ಬೋರ್ಡ್‌ಗೆ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಪಲ್ಲಾಪುರ ಗ್ರಾಮದ ಸರ್ವೆ ನಂಬರ್ 6ರಲ್ಲಿ 7.30 ಎಕರೆ ಜಮೀನು ಖರೀದಿಸಲಾಗಿದ್ದರೂ, 5 ಎಕರೆ ಮಾತ್ರ ಆಶ್ರಯ ಯೋಜನೆಗೆ ಮತ್ತು 2.30 ಎಕರೆ ರೈಲ್ವೆ ಮಾರ್ಗಕ್ಕೆ ಸೇರಿದೆ ಎಂದು ನಮೂದಾಗಿರುವುದರಿಂದ ಪಹಣಿ ತಿದ್ದುಪಡಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲವು ಕಡೆ ಜಮೀನು ಮಾಲೀಕರಿಂದ ಹಿಸ್ಸಾ ವಿಚಾರದಲ್ಲಿ ತಕರಾರು ಬಂದಿರುವುದರಿಂದಲೂ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ಕೂಡಲೇ ಸಮಸ್ಯೆ ಬಗೆಹರಿಸಿ, ಬಡಾವಣೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳ ಆಡಿಟ್ ಮಾಡಿಸಿ, ಜಾಗಗಳ ದಾಖಲೆಗಳನ್ನು ಸರಿಪಡಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಿ. ಈ ಕೆಲಸ ತ್ವರಿತವಾಗಿ ಆಗಬೇಕು” ಎಂದು ತಾಕೀತು ಮಾಡಿದರು.

ಡೆಬ್ರಿ ನಿರ್ವಹಣೆಗೆ ತೀವ್ರ ವಾಗ್ದಾಳಿ:

ಸಭೆಯಲ್ಲಿ ನಗರದ ರಿಂಗ್ ರೋಡ್ ಅಕ್ಕಪಕ್ಕಗಳಲ್ಲಿ ನಗದ ಹೊರಹೊಮ್ಮುವ ಕಸ, ಪ್ಲಾಸ್ಟಿಕ್ ಮತ್ತು ಕಟ್ಟಡಗಳ ಅಳಿದುಳಿದ ಅವಶೇಷಗಳನ್ನು ಸುರಿಯಲಾಗುತ್ತಿರುವುದನ್ನು ಸಚಿವರು ತೀವ್ರವಾಗಿ ಖಂಡಿಸಿದರು. “ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಪ್ರತಿ ವಿಐಪಿ ರಿಂಗ್ ರಸ್ತೆಯ ಮೂಲಕ ನಗರಕ್ಕೆ ಬರುತ್ತಾರೆ. ಇಂತಹ ಕಸ-ಕಡ್ಡಿ ಸುರಿಯುತ್ತಿದ್ದೀರಿ? ನಿಮಗೆ ಸಾಕಷ್ಟು ಸಿಬ್ಬಂದಿ ಮತ್ತು ಸಂಪನ್ಮೂಲಗಳಿವೆ. ಇನ್ನೂ ಜವಾಬ್ದಾರಿ ಬೇಡವೇ?” ಎಂದು ಸಚಿವರು ಅಧಿಕಾರಿಗಳನ್ನು ತೀವ್ರವಾಗಿ ಟೀಕಿಸಿದರು.

ಸ್ಯಾನಿಟೇಷನ್ ನಿರ್ವಹಣೆಯಲ್ಲಿ ಅಸಮರ್ಪಕತೆಯಿಂದಾಗಿ ಕಲಬುರಗಿ ಸ್ಮಾರ್ಟ್ ಸಿಟಿ ಯೋಜನೆಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ ಎಂದು ಎಚ್ಚರಿಸಿದ ಸಚಿವರು, “ನಗರವನ್ನು ಸ್ವಚ್ಛವಾಗಿಡದಿದ್ದರೆ ಹಾಗೂ ಅಭಿವೃದ್ಧಿ ಪಡಿಸದಿದ್ದರೆ ಕಂದಾಯ ವಿಭಾಗದಿಂದ ಅನುದಾನ ತರಲು ನನಗೆ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು. ಇತ್ತೀಚೆಗೆ ಬಸವನ ಬಾಗೇವಾಡಿಗೆ ಭೇಟಿ ನೀಡಿದ್ದ ಖರ್ಗೆ ಸಾಹೇಬರು ಅಸಮರ್ಪಕ ಒಳಚರಂಡಿ ನಿರ್ವಹಣೆಗೆ ಕೋಪಗೊಂಡಿದ್ದರು ಎಂದೂ ನೆನಪಿಸಿದರು.

ಹೋಟೆಲ್‌ಗಳು ಸೇರಿದಂತೆ ಉಪಹಾರಗೃಹಗಳಿಂದ ಹೊರಹೊಮ್ಮುವ ವ್ಯರ್ಥ ವಸ್ತುಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಕಮೀಷನರ್‌ಗೆ ಸೂಚಿಸಿದರು.

ಪೌರಕಾರ್ಮಿಕರ ರಜೆ ವಿಚಾರದಲ್ಲಿ ಸಲಹೆ:

ಪೌರಕಾರ್ಮಿಕರಿಗೆ ಎಲ್ಲರಿಗೂ ಒಂದೇ ದಿನ (ರವಿವಾರ) ರಜೆ ನೀಡುವುದು ಅವೈಜ್ಞಾನಿಕ ಎಂದು ವಿವರಿಸಿದ ಸಚಿವರು, “ಎಲ್ಲರಿಗೂ ಒಂದೇ ದಿನ ರಜೆ ನೀಡಿದರೆ ಸೋಮವಾರ ಕಸ ಸಂಗ್ರಹಕ್ಕೆ ಒತ್ತಡ ಬರುತ್ತದೆ. ಆದ್ದರಿಂದ ಬೇರೆ ಬೇರೆ ದಿನಗಳಲ್ಲಿ ರಜೆ ನೀಡಿ” ಎಂದು ಸಲಹೆ ನೀಡಿದರು.

ಪ್ರಸ್ತುತ ಮಹಾನಗರ ಪಾಲಿಕೆಯಡಿ 935 ಪೌರಕಾರ್ಮಿಕರಿದ್ದಾರೆ. ಕೋರ್ಟ್ ನಿರ್ದೇಶನದಂತೆ ರವಿವಾರ ರಜೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದಾಗ ಸಚಿವರು ಈ ಪರ್ಯಾಯ ಸಲಹೆ ನೀಡಿದರು.

ಇತರ ಸೂಚನೆಗಳು:

ಐತಿಹಾಸಿಕ ಕೋಟೆಯೊಳಗಿನ ಮನೆಗಳನ್ನು ಖಾಲಿ ಮಾಡಿಸುವಂತೆ, ಜಲಮೂಲಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಮತ್ತು ಮಹಾನಗರ ಪಾಲಿಕೆಯ ಆಸ್ತಿಗಳ ಗುರುತಿಸುವಿಕೆಗೆ ಅಭಿಯಾನ ಆರಂಭಿಸುವಂತೆ ಸಚಿವರು ಸೂಚಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ವಾರ್ಡ್ ಅಭಿವೃದ್ಧಿ ವಿಚಾರದಲ್ಲಿ ಶಾಸಕರಿಗೆ ಮಾಹಿತಿ ನೀಡದಿರುವುದನ್ನು ಎತ್ತಿ ಹಿಡಿದಾಗ, ಸಚಿವರು “ಶಾಸಕರಾಗಿ ನಿಮಗೆ ಅಧಿಕಾರವಿದೆ, ಪ್ರೊಟೋಕಾಲ್ ಪ್ರಕಾರ ಗಮನಕ್ಕೆ ತರದಿದ್ದರೆ ಕ್ರಮ ಕೈಗೊಳ್ಳಿ” ಎಂದು ಹೇಳಿದರು.

ಸಭೆಯಲ್ಲಿ ಶಾಸಕರು ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂಎಲ್‌ಸಿ ಜಗದೇವ ಗುತ್ತೇದಾರ್, ಮಹಾಪೌರ ವರ್ಷಾ ಜಾನೆ, ಕಮೀಷನರ್ ಅವಿನಾಶ್ ಶಿಂಧೆ, ಸಿಇಒ ಭಂವರ್ ಸಿಂಗ್ ಮೀನಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Tags: 2023amironews

Subscribe Now and Never Miss an Update!

Unsubscribe
  • Trending
  • Comments
  • Latest

ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ.ಕೆ.ಶಿವಕುಮಾರ್

4

ಬುಲ್ಸ್‌ಗೆ ಸವಾಲಾಗದ ಬೆಂಗಾಲ್‌ಅಲಿರೇಜಾ ಮತ್ತೊಮ್ಮೆ ಮಿಂಚು; ವಾರಿಯರ್ಸ್‌ ವಿರುದ್ಧ 43-32 ಅಂತರದ ಭರ್ಜರಿ ಗೆಲುವು

4

ಭಾರತ vs ಇಂಗ್ಲೆಂಡ್ 3ನೇ ಏಕದಿನ: 142 ರನ್ ಭರ್ಜರಿ ಜಯ, 3-0 ಸರಣಿ ಕ್ಲೀನ್ ಸ್ವೀಪ್!

2

ಚಾಮರಾಜನಗರದ ಬೇಗೂರಿನಲ್ಲಿ “ಸ್ವಸ್ಥ ನಾರಿ ಸಶಕ್ತ ಪರಿವಾರ” ಅಭಿಯಾನದ ಸಮಾರೋಪ ಸಮಾರಂಭ

2

ತುಂಗಭದ್ರ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯಕ್ಕೆ ತಕ್ಷಣ ನಿರ್ಧಾರ: ಬಿ.ವೈ. ವಿಜಯೇಂದ್ರ

September 5, 2026

ಶಿಕ್ಷಕರ ದಿನಾಚರಣೆ: ಸರ್ಕಾರಿ ಶಾಲೆಯಲ್ಲೇ ಆಚರಿಸಿದ ಸಚಿವ ಮಧು ಬಂಗಾರಪ್ಪ

September 5, 2026

ಹೈಕೋರ್ಟ್ ನೋಟಿಸ್ ನಡುವೆಯೂ ಗೃಹಲಕ್ಷ್ಮಿ ಹಣ ಬಾಕಿ; ಸರ್ಕಾರ ಪ್ರಚಾರಕ್ಕೆ ಮಾತ್ರ ಗಮನ: ನಿಖಿಲ್ ಕುಮಾರ್ ಆರೋಪ

September 5, 2026

ವಿದ್ಯಾರ್ಥಿಗಳನ್ನು ಉದ್ಯಮಿಗಳನ್ನಾಗಿ ಸಬಲೀಕರಿಸಿ; ವ್ಯವಹಾರ ಯೋಜನಾ ಸ್ಪರ್ಧೆಗಳಲ್ಲಿ ಹೆಚ್ಚು ಪಾಲ್ಗೊಳ್ಳಲು ಪ್ರೋತ್ಸಾಹಿಸಿ: ಸಚಿವ ಬಸವರಾಜ ರಾಯರೆಡ್ಡಿ

September 5, 2026

Recent News

ಕೊನೆಗೂ ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಮಂಜೂರು: 2 ಕೋಟಿ ಜೀವನಾಂಶ ನೀಡಲು ಹೈಕೋರ್ಟ್ ಆದೇಶ

September 3, 2026

ಲಾಲ್‌ಬಾಗ್ ಸೇರಿದಂತೆ ಉದ್ಯಾನವನ ಭೂಮಿ ಮಾರಾಟ ವಿಧೇಯಕ: ಡಿಕೆ ಶಿವಕುಮಾರ್ ಸರ್ಕಾರಕ್ಕೆ ಬಿಜೆಪಿ ನಾಯಕ ಅಶೋಕರಿಂದ ತೀವ್ರ ಟೀಕೆ

September 3, 2026

ಕೆಆರ್‌ಐಡಿಎಲ್‌ನಲ್ಲಿ 7% ಲಂಚ: ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐಗೆ ತನಿಖೆ ವಹಿಸಿ – ಪ್ರತಿಪಕ್ಷ ನಾಯಕ ಆರ್. ಅಶೋಕ

September 3, 2026

ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಮುಂದುವರಿಕೆ

September 2, 2026
https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news https://play.google.com/store/apps/details?id=com.ktplamiro.news
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.