ಬೆಂಗಳೂರು: ಭಾರತೀಯ ಸಂInಗೀತ ಲೋಕದ ಅಮೂಲ್ಯ ಧ್ವನಿಯಾಗಿದ್ದ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಅಪೂರ್ವ ಗಾಯನದ ಮೂಲಕ ಕೋಟ್ಯಂತರ ಜನರ ಹೃದಯವನ್ನು ಸ್ಪರ್ಶಿಸಿದ ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಸಂಗೀತಾಸಕ್ತರನ್ನು ತೀವ್ರ ದುಃಖಕ್ಕೆ ಒಳಗು ಮಾಡಿದೆ.
ಅವರ ಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ಸಂಗೀತದ ಮೇಲಿನ ಅಪಾರ ನಿಷ್ಠೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸದಾ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿವೆ. ಜಾನಕಿ ಅವರ ಹಾಡುಗಳು ಪೀಳಿಗೆಯಿಂದ ಪೀಳಿಗೆಗೆ ಸಂಗೀತ ಪ್ರಿಯರ ಹೃದಯದಲ್ಲಿ ಚಿರಸ್ಥಾಯಿಯಾಗಿ ಮೊಳಗುತ್ತಲೇ ಇರುವುದು ನಿಶ್ಚಿತ.
ಬಿಜೆಪಿ ನಾಯಕ ಆರ್. ಅಶೋಕ್ ಅವರು ಈ ದುಃಖದ ಸುದ್ದಿಯನ್ನು ಖಂಡಿಸುತ್ತಾ, “ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.
ಓಂ ಶಾಂತಿ 🙏🏻











